ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲವು ಸಾಧಿಸಿರುವ ಹಿನ್ನೆಲೆಯಲ್ಲಿ ಚಳ್ಳಕೆರೆ ಬಿಜೆಪಿ ಕಾರ್ಯಕರ್ತರು ಮುರಡಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಸಹಿ ಹಂಚಿ ಸಂಭ್ರಮಿಸಿದರು.
ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ 15 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನಗಳಲ್ಲಿ ಜಯಗಳಿಸಿದ್ದು, ಕಾಂಗ್ರೆಸ್ ಎರಡು, ಪಕ್ಷೇತರ ಒಂದು ಹಾಗೂ ಜೆಡಿಎಸ್ ಶೂನ್ಯ ಸಾಧನೆ ಮಾಡಿದೆ.
ಬಿಜೆಪಿ ಇಷ್ಟು ಸ್ಥಾನಗಳನ್ನು ಗಳಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಖುರ್ಚಿ ಹಾಗೂ ರಾಜ್ಯ ಸರ್ಕಾರ ಮುಂದಿನ ಮೂರೂವರೆ ವರ್ಷ ಸುಭದ್ರವಾಗಿರಲು ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಚಳ್ಳಕೆರೆ ಬಿಜೆಪಿ ಸಂಚಾಲಕರಾದ ಬೋರನಾಯಕ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಸೋಮುಗುದ್ದಿ ರಸ್ತೆಯ ಮುರಡಿ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಸಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಯುವಘಟಕದ ಅಧ್ಯಕ್ಷ ಆರ್. ನಾಗೇಶ್, ಮಾಧ್ಯಮ ವಕ್ತಾರ ದಿನೇಶ ರಡ್ಡಿ ಬಿಜೆಪಿ ಕಾರ್ಯಕರ್ತರಾದ ಲೋಕೇಶ್, ಮಲ್ಲಿಕಾರ್ಜುನ್, ಪಿ. ಬಸವರಾಜ್, ರಾಮೇಗೌಡ, ಹನುಮಂತರಾಯ, ಎನ್. ತಿಪ್ಪೇರುದ್ರಪ್ಪ, ಮಹಾಲಿಂಗಪ್ಪ, ಚಂದ್ರಣ್ಣ, ಬಿ. ಬಯಲಪ್ಪ, ಸಿದ್ದೇಶ, ಗೌರಮ್ಮ ಬೋರನಾಯಕ, ವಿಶ್ವನಾಥ, ಅರುಣಕುಮಾರ್ ಕ್ಯಾತ್ಯಾಯಿನಿ ಇತರರಿದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post