ಕಲ್ಪ ಮೀಡಿಯಾ ಹೌಸ್ | ಬೈಂದೂರು |
ಕೇಂದ್ರ ಮತ್ತು ರಾಜ್ಯ ಸರ್ಕಾರವು ಈ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನವು ನೀಡಿದ್ದು 1500 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳು ಶಂಕುಸ್ಥಾಪನೆ ಹಾಗೂ ಉದ್ಘಾಟನೆಯಾಗಿದ್ದು, ಈ ಕಾಮಗಾರಿಗಳ ಕೆಲಸವನ್ನು ಶೀಘ್ರ ಪ್ರಾರಂಭಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿ ಕೊಡಬೇಕು ಎಂದು ಶಿವಮೊಗ್ಗ ಸಂಸದ ಬಿ. ವೈ ರಾಘವೇಂದ್ರ MP Raghavendra ಸೂಚಿಸಿದರು.
ಬೈಂದೂರು ವಿಧಾನಸಭಾ ಕ್ಷೇತ್ರದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಭಾಗವಹಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

- ಬೈಂದೂರು ಕ್ಷೇತ್ರದ ಸರ್ಕಾರಿ ಸ್ಥಳಗಳಲ್ಲಿ 160 ಕ್ಕೂ ಹೆಚ್ಚು ದೇವಸ್ಥಾನ, 60ಕ್ಕೂ ಅಧಿಕ ನಾಗಬನಗಳಿದ್ದು ಇದನ್ನು ಧಾರ್ಮಿಕ ಕ್ಷೇತ್ರದ ಹೆಸರಿಗೆ ಮಂಜೂರು ಮಾಡಲು ಕ್ರಮ.
- ಗೋಮಾಳ,ರುದ್ರಭೂಮಿ ಸ್ಥಳಗಳ ಗಡಿ ಗುರುತು ಮಾಡಿ ಉತ್ತುವರಿ ಮಾಡದಂತೆ ರಕ್ಷಿಸಿ ಅಭಿವೃದ್ಧಿಗೊಳಿಸುವುದು.
- ಡಿಮ್ಡ್ ಅರಣ್ಯ ಪಟ್ಟಿಯಿಂದ ವಿರಹಿತಗೊಂಡ 94ಇ ಹಾಗೂ ಅಕ್ರಮ ಸಕ್ರಮ ಕಡತ ಒಂದು ತಿಂಗಳ ಒಳಗೆ ಮಂಜೂರು ಮಾಡಲು ಕ್ರಮವಹಿಸಬೇಕು.
- ಕಾಲಸಂಕಗಳು ಮಂಜೂರು ಆಗಿದ್ದು ಒಂದು ವಾರದಲ್ಲಿ ಟೆಂರ್ಡ ಪ್ರಕ್ರಿಯೆ ಗೊಳಿಸಲು ಸೂಚನೆ.
- ಮಾದಕ ವಸ್ತು ಅಕ್ರಮ ಸರಾಯಿ ಮಾರಾಟ ಮಾಡುವವರನ್ನು ಕಾನೂನು ಕ್ರಮಕ್ಕೆ ಒಳಪಡಿಸುಬೇಕು.
- ಬೈಂದೂರು ಕ್ಷೇತ್ರದ ಗ್ರಾಮೀಣ ಪ್ರದೇಶಗಳಿಗೆ 23 ಆಖಘೆಔ ಟರ್ವ_ಗಳು ಮಂಜುರಾತಿಯಾಗಿದ್ದು, ಶೀಘ್ರ ಸ್ಥಳ ಗುರುತು ಮಾಡಲು ಸೂಚನೆ ನೀಡಲಾಗಿದೆ.












Discussion about this post