ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೈಂದೂರು: ಮೂಲಭೂತ ಸೌಲಭ್ಯಗಳ ಉನ್ನತೀಕರಣದಲ್ಲಿ ಕ್ಷೇತ್ರದಲ್ಲಿ ವಿಶಾಲ ರಸ್ತೆಗಳ ನಿರ್ಮಾಣದ ಭರವಸೆ ನೀಡಿದ್ದ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.
ಹೌದು… ದಕ್ಷಿಣ ಭಾರತದ ಅತ್ಯಂತ ಪ್ರಮುಖ ಕಾರಣಿಕ ಸ್ಥಳವಾದ ಕೊಲ್ಲೂರು ದೇವಳಕ್ಕೆ ತೆರಳುವ ಮಾರ್ಗ ಕೊಲ್ಲೂರು-ಹೆಮ್ಮಾಡಿ ಮುಖ್ಯರಸ್ತೆ ಈಗ 11 ಮೀ ಅಗಲದ ರಸ್ತೆಯಾಗಿ ನಿರ್ಮಾಣವಾಗುತ್ತಿದೆ. ಇದಕ್ಕೆ ಜೊತೆಯಾಗಿ ಚಿತ್ತೂರು ವೃತ್ತ, ನೆಂಪು ವೃತ್ತ ಹಾಗೂ ಮಾರ್ಗದ ಕೆಲವೆಡೆಗಳಲ್ಲಿ ರಸ್ತೆ ಈಗಾಗಲೇ ಅಗಲವಾಗಿದೆ.
ಇನ್ನು ಇದಕ್ಕೆ ಪೂರಕವಾಗಿ ಇಂದು ಬೈಂದೂರು ಶಾಸಕ ಸುಕುಮಾರ ಶೆಟ್ಟಿಯವರು ನೆಂಪು ವೃತ್ತದ ದೀಪವನ್ನು ಸಾಂಕೇತಿಕವಾಗಿ ಪ್ರಾರಂಭಿಸಿದರು.
ರಂಗಸಂಚಲನ 12ರ ಸಂಭ್ರಮ
ಬೈಂದೂರು ಕ್ಷೇತ್ರದ ಅತ್ಯಂತ ಹಿಂದುಳಿದ ಪ್ರದೇಶವಾದ ಹೊಸೂರು-ತೂದಳ್ಳಿ ಸಂಚಲನ ಹೊಸೂರು ರಂಗಸಂಚಲನ 12ರ ಸಂಭ್ರಮ (ಪರಿಶಿಷ್ಟ ಪಂಗಡದವರ ತಂಡ) ಕಾರ್ಯಕ್ರಮವನ್ನು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ನೆರವೇರಿಸಿದರು. ಕಳೆದ ಹನ್ನೆರಡು ವರ್ಷಗಳಿಂದ ಅನೇಕ ಸಾಂಸ್ಕ್ರತಿಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ತನ್ನದೇ ಆದ ಸಾಧನೆ ಮಾಡಿದ ತಂಡವನ್ನು ಶಾಸಕರು ಗೌರವಿಸಿದರು.
ಬಿಜೆಪಿಗೆ ಸೇರ್ಪಡೆ
ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಇದರ ನಿರ್ದೇಶಕರಾದ ನಾಗರಾಜ್ ನಾಯ್ಕ್ ಇವರು ಬೈಂದೂರು ಶಾಸಕಸುಕುಮಾರ ಶೆಟ್ಟಿ ಅವರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಸಿದ್ದಾಪುರ ಜಿಪಂ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ವ್ಯವಸಾಯ ಬ್ಯಾಂಕ್ ಅಧ್ಯಕ್ಷರಾದ ಜಯರಾಮ್ ಭಂಡಾರಿ, ಮಹೇಶ್ ನಾಯಕ್, ಮಾಧವ ಶೆಣೈ, ಅವಿನಾಶ್ ಶೆಟ್ಟಿ ಹೊಸಂಗಡಿ ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093
Discussion about this post