ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶ್ರಾವಣದ ಉಡುಗೊರೆ ನೀಡಿದ್ದು, ತುಟ್ಟಿಭತ್ಯೆಯನ್ನು ಹೆಚ್ಚುವರಿಯಾಗಿ ಶೇ.2ರಷ್ಟು ನೀಡಲು ನಿರ್ಧರಿಸಿದೆ.
ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದ್ದು, ಕೇಂದ್ರ ಸರ್ಕಾರಿ ನೌಕರರರು ಸದ್ಯ ಶೇ.7ರಷ್ಟು ತುಟ್ಟಿಭತ್ಯೆ ಪಡೆಯುತ್ತಿದ್ದು, ಅದನ್ನು ಈಗ ಶೇ.9ಕ್ಕೆ ಏರಿಕೆ ಮಾಡಲಾಗಿದೆ.
ಇನ್ನು, 2018ರ ಜುಲೈ 1ರಿಂದಲೇ ಪೂರ್ವನ್ವಯವಾಗುವಂತೆ ವೇತನ ಹೆಚ್ಚಳ ಪೂರ್ವಾನ್ವಯವಾಗುವಂತೆ ಅನುಮತಿ ನೀಡಲಾಗಿದ್ದು, ಇದರಿಂದ 1.1 ಕೋಟಿ ನೌಕರರಿಗೆ ಸಹಕಾರಿಯಾಗಲಿದೆ.
Discussion about this post