ಕಲ್ಪ ಮೀಡಿಯಾ ಹೌಸ್ | ಕ್ಯಾನ್ಬೆರಾ |
ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲೇ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವ್ಯಕ್ತಿ, ಸೀಟ್ ಬೆಲ್ಟ್ ಧರಿಸಿಲ್ಲದ ಕಾರಣ ಪೊಲೀಸರು ದಂಡದ ವಿಧಿಸಿರುವ ಘಟನೆ ನಡೆದಿದೆ.
Shameless driver fined for high-risk sex act on busy Australian motorway https://t.co/0obY0TCoVq
— Daily Mail Australia (@DailyMailAU) October 24, 2022
ಇಬ್ಬರೂ ಪೆಸಿಫಿಕ್ ಮೋಟಾರು ಮಾರ್ಗದಲ್ಲಿ ಹಾದು ಹೋಗುತ್ತಿದ್ದಾಗ ವ್ಯಕ್ತಿಯು ಚಲಿಸುವ ಕಾರಿನಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯಾವಳಿ ರಸ್ತೆ ಬದಿಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನು ಕಂಡ ಅಧಿಕಾರಿಗಳು ಆತನಿಗೆ 1,087 ಡಾಲರ್ ಅಂದರೆ ಸುಮಾರು 89 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.
ಸಾರಿಗೆ ಮತ್ತು ಮುಖ್ಯ ರಸ್ತೆಗಳ ಇಲಾಖೆಯ ವಕ್ತಾರರು ಘಟನೆಯನ್ನು ದೃಢಪಡಿಸಿದ್ದು, ಇದನ್ನು ಚಾಲಕನ ಅಪಾಯಕಾರಿ ನಡವಳಿಕೆ ಎಂದು ಗುರುತಿಸಿ ದಂಡ ವಿಧಿಸಿದ್ದಾರೆ. ಸದ್ಯ ಪತಿ-ಪತ್ನಿ ಇಬ್ಬರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Also read: ಜೆಎನ್‌ಎನ್‌ಸಿಇ : ತಾಂತ್ರಿಕತೆಯ ಚಾವಡಿಯಲ್ಲಿ ಕನ್ನಡದ ಝೇಂಕಾರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post