ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕತೆಗೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತದೃಷ್ಠಿಯಿಂದ ಆದಾಯ ತೆರಿಗೆ ಪಾವತಿಗೆ ಜೂನ್ 30ರವರೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿರುವ ಅವರು, 2018-19ನೆಯ ಸಾಲಿನ ಆದಾಯ ತೆರಿಗೆ ಪಾವತಿ ಅವಧಿಯನ್ನು ಜೂನ್ 30ರವರೆಗೂ ವಿಸ್ತರಿಸಲಾಗಿದೆ. ಟಿಡಿಎಸ್ ಜಮಾ ಅವಧಿ ವಿಸ್ತರಣೆಯಿಲ್ಲ. ಆದರೆ, ಬಡ್ಡಿ ಕಡಿಮೆ ಮಾಡಲಾಗುವುದು ಎಂದಿದ್ದಾರೆ.
ಮುಖ್ಯಾಂಶಗಳು
- ತೆರಿಗೆ ಪಾವತಿ ವಿಳಂಭವಾದರೆ ಶೇ.9ರಷ್ಟು ದಂಡ
- ಮೂಲ ಆದಾಯದಲ್ಲೇ ಶೇ.12ರ ಬದಲಾಗಿ ಶೇ.9ಕ್ಕೆ ಇಳಿಕೆ
- ಸಬ್ ಕಾ ವಿಶ್ವಾಸ್ ಸ್ಕೀಂ ಅವಧಿ ಜೂನ್ 30ಕ್ಕೆ ವಿಸ್ತರಣೆ
Get in Touch With Us info@kalpa.news Whatsapp: 9481252093
Discussion about this post