ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ತಾಲೂಕಿನ ಬೆಳಗೆರೆ ಪಂಚಾಯ್ತಿಯಲ್ಲಿ 2020-21 ನೇ ಸಾಲಿನ ಬಜೆಟ್ ಮಂಡನೆ ಮಾಡಲಾಗಿದೆ.
ಗ್ರಾಮಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಇ. ಗುಂಡಪ್ಪ ಮಾತನಾಡಿ, ತಾಲೂಕಿನಲ್ಲಿ ಈ ಗ್ರಾಮ ಪಂಚಾಯ್ತಿಯಲ್ಲಿ ಇದೇ ಮೊದಲ ಬಾರಿಗೆ ಆಯವ್ಯಯ ಪಟ್ಟಿಯನ್ನು ತಯಾರಿಸಿ ಬಜೆಟ್ ಮಂಡಿಸಲಾಯಿತು. 2.48410 ಲಕ್ಷ ರೂಪಾಯಿ ಉಳಿತಾಯ ಬಜೆಟ್ ಮಂಡಿಸಿದ್ದು ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಬಡವರಿಗೆ ಮನೆ ನಿರ್ಮಾಣ, ಉದ್ಯೋಗ ಖಾತ್ರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ತಿಪ್ಪಮ್ಮ ಮಂಜುನಾಥ ಮಾತನಾಡಿ, ಇದುವರೆಗೂ ದೇಶದಲ್ಲಿ, ರಾಜ್ಯದಲ್ಲಿ ಬಜೆಟ್ ಮಂಡನೆ ಮಾಡುತ್ತಿದ್ದನ್ನು ನಾವು ನೋಡಿದ್ದವು. ಆದರೆ ಗ್ರಾಮ ಪಂಚಾಯ್ತಿಯಲ್ಲಿ ಇದೇ ಮೊದಲ ಬಾರಿಗೆ ಬಜೆಟ್ ಮಂಡನೆಯಾಗಿರುವುದು ಸಂತಸ ತಂದಿದೆ. ಹೆಚ್ಚಿನ ಅಭಿವೃದ್ದಿ ಕೆಲಸಕ್ಕೆ ಆದ್ಯತೆ ನೀಡಲಾಗುವುದು. ಬಯಲು ಶೌಚಾಲಯ ಮುಕ್ತ ಪಂಚಾಯ್ತಿಯನ್ನಾಗಿ ಮಾಡಲಾಗುವುದು ಗುಡಿಸಲು ಮುಕ್ತ ಗ್ರಾಮ, ಸ್ವಚ್ಚ ಗ್ರಾಮಗಳನ್ನಾಗಿ ಮಾಡಲಾಗುವುದು ಎಂದರು.
ಗ್ರಾಮಪಂಚಾಯ್ತಿ ಉಪಾಧ್ಯಕ್ಷೆ ಮಹದೇವಮ್ಮ, ಗ್ರಾಮಪಂಚಾಯ್ತಿ ಸದಸ್ಯರಾದ ಕೆ.ಟಿ. ನಿಜಲಿಂಗಪ್ಪ, ಗೋಪಾಲಪ್ಪ, ಶಿವಣ್ಣ, ದ್ಯಾಮಣ್ಣ, ನಾಗಭೂಷನ್ ರಾವ್, ಬಲರಾಮಣ್ಣ, ಎ. ಸುನಿತ, ಮಂಜುಳ, ಸಂಗಮ್ಮ, ಶಾರದಮ್ಮ, ಗ್ರಾಮಪಂಚಾಯ್ತಿ ಸಿಬ್ಬಂದಿ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093
Discussion about this post