ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಲೂಕಿನ ಗೋಪನಹಳ್ಳಿ ಗ್ರಾಮದ ಬಾಪೂಜಿ ಗ್ರಾಮಾಂತರ ಪ್ರೌಢಶಾಲೆಯ ಸಮೀಪದ ಪೆಟ್ಟಿಗೆ ಅಂಗಡಿಗೆ ನಿನ್ನೆ ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ಬೆಂಕಿ ಬಿದ್ದು ಸುಮಾರು 1.5ಲಕ್ಷ ರೂ. ನಷ್ಟವಾಗಿದೆ ಎಂದು ಪೆಟ್ಟಿಗೆ ಅಂಗಡಿ ಮಾಲಕಿ ಜಯಲಕ್ಷ್ಮಿ ಅಳಲು ತೋಡಿಕೊಂಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಪೆಟ್ಟಿಗೆ ಅಂಗಡಿಯಲ್ಲಿದ್ದ ಗ್ಯಾಸ್ ಸಿಲೆಂಡರ್, ಕಿವಿಯೋಲೆ, ಪ್ರಿಜ್, ಹಣ ಸೇರಿದಂತೆ ಇತರೆ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿ ಎಂದು ಮಾಹಿತಿ ನೀಡಿದ್ದಾರೆ.
ಸಕಾಲದಲ್ಲಿ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿದ್ದರಿಂದ ಹೆಚ್ಚಿನ ಅನಾವುತ ತಪ್ಪಿದೆ. ಸಮೀಪದ ಮನೆಯ ಗರ್ಭಿಣಿ ಮಹಿಳೆ ಅದೇ ಸಮದಯಲ್ಲಿ ಮನೆಯಿಂದ ಹೊರ ಬಂದಿದ್ದರಿಂದ ಪೆಟ್ಟಿ ಅಂಗಡಿಗೆ ಬಿದ್ದ ಬೆಂಕಿಯ ಜ್ವಾಲೆಯನ್ನು ಕಂಡು ಪಜ್ಞೆ ತಪ್ಪಿ ಬಿದ್ದಿದ್ದರು. ತಕ್ಷಣ ತುರ್ತು ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದು ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಯಿತು ಎನ್ನಲಾಗಿದೆ.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post