ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಫ್ರಂಟ್ ಲೈನ್ ವಾರಿಯರ್ಸ್ ತಾಲ್ಲೂಕಿನ ಕಾರ್ಯನಿರತ ಪತ್ರಕರ್ತರಿಗೆ ಕೋರೋನಾ ಸುರಕ್ಷತಾ ಕಿಟ್ ನೀಡಲು ನಗರಸಭೆ ಅಧ್ಯಕ್ಷೆ ಸಿ. ಬಿ.ಜಯಲಕ್ಷ್ಮೀ ಹಾಗು ಪೌರಯುಕ್ತರಾದ ಪಿ.ಪಾಲಯ್ಯ ಇವರಿಗೆ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮನವಿ ನೀಡಲಾಯಿತು.
ನಗರಸಭೆ ಸಭಾಂಗಣದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಈಶ್ವರಪ್ಪ, ನಗರದಲ್ಲಿ ಕೊರೋನಾ ಎರಡನೆ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಇಂತಹ ಅಪಾಯ ಸಮಯದಲ್ಲಿಯು ನಡೆಬಹುದಾದ ಹಲವಾರು ಘಟನೆಗಳು, ಕೋರೋನಾ ಜಾಗೃತಿ, ಹಾಗೂ ಇತರೆ ಸಂಬಂಧಿಸಿದಂತಹ ಸುದ್ದಿ ಮಾಡಲು ಹೋಗುವ ಕಾರ್ಯನಿರತ ಪತ್ರಕರ್ತರು ಸೈನಿಕರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಸುದ್ದಿ ಮಾಡಲು ಹೋದವರು ಸೋಂಕಿಗೆ ಬಲಿಯಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ ವರ್ಷ ಲಾಕ್ ಡೌನ್ ಸೇರಿ ಪ್ರಸ್ತುತ ಎರಡನೆಯ ಅಲೆಯ ಸಂದರ್ಭದಲ್ಲಿಯೂ ಜೀವ ಲೆಕ್ಕಿಸದೆ ಸದಾಕಾಲವು ದುಡಿಯುವ ಪತ್ರಕರ್ತರು ಬರಿ ವಾರಿಯರ್ಸ್ ಆದರೆ ಸಾಲದು. ಲಾಕ್ ಡೌನ್ ನಿಂದ ಪತ್ರಕರ್ತರ ಬದುಕು ಸಹ ಕಷ್ಟದ ಪರಿಸ್ಥತಿಗೆ ತಲುಪಿದೆ. ಜೀವ ಒತ್ತೆ ಇಟ್ಟು ಕಾರ್ಯನಿಹಿಸುವ ಪತ್ರಕರ್ತರಿಗೆ ತಾಲ್ಲೂಕಿನ ಯಾವ ಇಲಾಖೆ ಮಾಸ್ಕ್, ಸ್ಯಾನಿಟೈಜರ್ ಇತರೆ ಕೊರೋನಾ ಸುರಕ್ಷತೆಯ ಕಿಟ್ಟುಗಳನ್ನು ನೀಡಿರುವುದಿಲ್ಲಾ. ಆದಕಾರಣ ನಗರಸಭೆ ವತಿಯಿಂದ ಆದರೂ ನಿರಂತರವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಇಂತಹ ಸಮಯದಲ್ಲಿ ಕೋರೋನಾ ರಕ್ಷಣಾ ಕಿಟ್ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಕರ್ಲಬಕುಂಟೆ ತಿಪ್ಪೇಸ್ವಾಮಿ, ಟಿ.ಜೆ. ತಿಪ್ಪೇಸ್ವಾಮಿ, ಸುರೇಶ ಬೆಳಗೆರೆ, ಮಂಜುನಾಥ ಇತರರಿದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post