ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಕಸಬಾ ಹೋಬಳಿಯ ರೈತರಿಗೆ ಆಹಾರ ಭದ್ರತಾ ಯೋಜನೆಯಡಿ ನೀಡಬೇಕಾಗಿದ್ದ ೧೬೧೫ ಶೇಂಗಾ ಕಿಟ್ ಹಾಗೂ 600 ತೊಗರಿ ಕಿಟ್‌ಗಳನ್ನು ಕಳೆದ 10 ದಿನಗಳಿಂದ ಕೃಷಿ ಇಲಾಖೆ ವಿತರಣೆ ಮಾಡಿದೆ. ಆದರೆ ಮಂಗಳವಾರ ನಮಗೂ ಪ್ರೀ ಕಿಟ್ ಕೊಡಬೇಕು ಎಂದು ಕಿಟ್ ಸಿಗದ ಕಸಬಾ ಹೋಬಳಿ ರೈತರು ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಅವರಣದಲ್ಲಿ ಜಮಾಯಿಸಿ ಆಗ್ರಹಿಸಿದರು.
ರೈತರು ಗಲಾಟೆ ಪ್ರಾರಂಭಿಸಿ, ಗೊಂದಲ ಸೃಷ್ಟಿಸಿಯಾಗುತ್ತಿರುವುದನ್ನು ಅರಿತ ಅಧಿಕಾರಿಗಳು, ದೂರವಾಣಿ ಮೂಲಕ ಪೋಲೀಸರಿಗೆ ಮಾಹಿತಿ ನೀಡಿದರು. ಪೊಲೀಸ್ ಸಿಬ್ಬಂದಿಗಳಾದ ಚಂದ್ರನಾಯಕ್, ವೆಂಕಟೇಶ, ಹರೀಶ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿನ ಪರಿಸ್ಥಿತಿಯನ್ನು ಅರಿತು ಉಚಿತ ಬೀಜದ ಕಿಟ್‌ನ ಬಗ್ಗೆ ಮಾಹಿತಿ ರೈತರಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು.
ಕೃಷಿ ಸಹಾಯಕ ನಿರ್ದೇಶಕ ಮೋಹನ್ ಕುಮಾರ್ ಮಾತನಾಡಿ, ಕಳೆದ 10 ದಿನಗಳಿಂದ ಸರ್ಕಾರ ಕಸಬಾ ಹೋಬಳಿಯ ರೈತರಿಗೆ ನಿಗಧಿಪಡಿಸಿದ 1615 ತೊಗರಿ ಕಿಟ್ ಹಾಗೂ 600 ಶೇಂಗಾದ ಉಚಿತ ಬೀಜದ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ಇನ್ನು ಸಬ್ಸಿಡಿ ದರದಲ್ಲಿ ಬೀಜದ ಶೇಂಗಾ, ತೋಗರಿ ಬೀಜ ವಿತರಣೆ ಮಾಡಲಾಗುವುದು ಎಂದು ರೈತರಿಗೆ ಸ್ಪಷ್ಟನೆ ನೀಡಿದರು.
ಆದರೆ ಇದಕ್ಕೆ ಒಪ್ಪದ ರೈತರು ಅದು ಹೇಗೆ ಖಾಲಿಯಾಗುತ್ತದೆ. ಉಚಿತ ಬೀಜದ ಕಿಟ್ ವಿತರಣೆ ಮಾಡಿದ ಮೇಲೆ ಎಲ್ಲರಿಗೂ ನೀಡಬೇಕು. ಒಬ್ಬರ ಕಣ್ಣಿಗೆ ಬೆಣ್ಣೆ, ಇನ್ನೊಬ್ಬರ ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡಬಾರದು. ಉಚಿತ ಬೀಜದ ಕಿಟ್ ವಿತರಣೆ ಮಾಡಬೇಕಾದರೆ ಎಲ್ಲರಿಗೂ ವಿತರಣೆ ಮಾಡಬೇಕು. ಇಲ್ಲವಾದರೆ ಯಾರಿಗೂ ಕೂಡ ವಿತರಣೆ ಮಾಡಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಬಂದ ರೈತರಿಗೆ ಉಚಿತ ಕಿಟ್ ವಿತರಣೆ ಮಾಡಲಾಗಿದ್ದು, ಇಂದು ಖಾಲಿಯಾಗಿದೆ ಎಂದು ಹೇಳುತ್ತೀದ್ದೀರಾ ಗೋಡಂನಲ್ಲಿ ಶೇಂಗಾ ಹಾಗೂ ತೊಗರಿ ಕಿಟ್ ದಾಸ್ತಾನು ಖಾಲಿಯಾಗಿರುವ ಬಗ್ಗೆ ಗೋಡನ್ ಬೀಗ ತೆಗೆದು ತೋರಿಸಿ, ನಂತರ ಮನೆಗೆ ಹೋಗುತ್ತೇವೆ ಎಂದು ಒತ್ತಾಯಿಸಿದ ಪರಿಣಾಮ ಕೃಷಿ ಸಹಾಯಕ ನಿರ್ದೇಶಕರು ಗೋಡನ್‌ಗಳ ಬೀಗ ತೆಗೆದು ತೋರಿಸಿದರು. ನಂತರ ಕಿಟ್‌ಗಳು ಖಾಲಿಯಾಗಿರುವುದನ್ನು ಅರಿತ ರೈತರು ಹಿಂತಿರುಗಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post