ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ವಕೀಲರಿಗೆ ಸೂಕ್ತ ಭದ್ರತೆ ಮತ್ತು ಕೊಲೆಗಾರನಿಗೆ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಪ್ರತಿಭಟನೆ ನಡೆಸಿ ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಚಳ್ಳಕೆರೆ ವಕೀಲರ ಸಂಘದ ಅಧ್ಯಕ್ಷ ಜಿ.ಎಂ. ಆನಂದಪ್ಪ ಮಾತನಾಡಿ, ಹೊಸಪೇಟೆಯ ನ್ಯಾಯಾಲಯ ಆವರಣದಲ್ಲಿ ಮಚ್ಚಿನಿಂದ ಕೊಚ್ಚಿ ತಾರಿಹಳ್ಳಿ ವೆಂಕಟೇಶ ಅವರನ್ನು ಕೊಲೆ ಮಾಡಿರುವುದು ಅವಮಾನೀಯ ಘಟನೆಯಾಗಿದೆ. ನ್ಯಾಯಕ್ಕಾಗಿ ಬಡಿದಾಡುವ, ಕಕ್ಷಿದಾರರ ಪರವಾಗಿ ವಾದ ಮಾಡುವುದು ವಕೀಲರ ಕೆಲಸ. ಅಂತಹ ಕೆಲಸದಲ್ಲೂ ಈಗ ಜೀವಕ್ಕೆ ಭದ್ರತೆ ಇಲ್ಲದಂತಾಗಿದೆ. ಒಬ್ಬ ಸಾಮಾನ್ಯ ಮನುಷ್ಯ ಹಾಡುಹಗಲಲ್ಲೆ ಕಾರ್ಯನಿರ್ವಹಿಸುತ್ತಿದ್ದ ವಕೀಲರನ್ನು ಕೊಲೆ ಮಾಡುವುದು ಎಷ್ಟರಮಟ್ಟಿಗೆ ಸರಿ. ಆದ್ದರಿಂದ ರಾಜ್ಯ ವಕೀಲರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ನ್ಯಾಯಾಲಯದಲ್ಲಿ ಪೊಲೀಸ್ ಭದ್ರತೆ ಇನ್ನಷ್ಟು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ವಕೀಲ ಸಂಘದ ಸದಸ್ಯ ವಿಶ್ವನಾಥ ಮಾತನಾಡಿ, ಹಾಡುಹಗಲೇ ತಾರಿಹಳ್ಳಿ ವೆಂಕಟೇಶ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದ್ದು, ಇದೇ ರೀತಿ ಹಿಂದೆಯೂ ಸಹ ವಕೀಲ ದಂಪತಿಗಳನ್ನು ಕೊಲೆ ಮಡಲಾಗಿತ್ತು. ವಕೀಲರಿಗೆ ಯಾವುದೇ ರಕ್ಷಣೆಯಿಲ್ಲದಂತ್ತಾಗಿದೆ. ನ್ಯಾಯಾಲಯದ ಆವರಣದಲ್ಲೇ ಈ ರೀತಿ ನಡೆದಿರುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ವಕೀಲರ ರಕ್ಷಣೆಗೆ ಕಾರ್ಯರೂಪಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದರು.
ಚಳ್ಳಕೆರೆ ವಕೀಲರ ಸಂಘದ ಉಪಾಧ್ಯಕ್ಷ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಉಪೇಂದ್ರಕುಮಾರ್, ಜಂಟಿ ಕಾರ್ಯದರ್ಶಿ ಜಿ. ಕಾಂತರಾಜ್, ಟಿ.ರುದ್ರಯ್ಯ, ಜಿ.ಟಿ. ನಾಗರಾಜ್, ಎಲ್. ಕುಮಾರ್. ಜಗದೀಶ ನಾಯಕ ಪೆನ್ನಯ್ಯ ಬೆಳಗರೆ ಎಂ. ತಿಪ್ಪೇಸ್ವಾಮಿ, ಹನುಮಂತಪ್ಪ, ಶ್ರೀನಿವಾಸ್, ಸಿದ್ದರಾಜು, ಮಧುಮತಿ, ತಿಪ್ಪೇಸ್ವಾಮಿ, ಪಾಪಣ್ಣ, ಗುರುಮೂರ್ತಿ, ಕುಮಾರ್ ಜಡೆಕುಂಟೆ ಹಾಗೂ ವಕೀಲರ ಸಂಘದ ಸದಸ್ಯರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post