ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಜಮೀನು ವಿಚಾರದಲ್ಲಿ ಮಹಿಳೆಯರ ನಡುವೆ ನಡೆದ ಜಗಳದಲ್ಲಿ ಓರ್ವ ಮಹಿಳೆ ಬಲಿಯಾಗಿರುವ ಘಟನೆ ತಾಲೂಕಿನ ಪಿ.ಓಬನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಘಟನೆಯ ವಿವರ:
ಒಂದೇ ಸರ್ವೇ ನಂಬರ್ ಜಮೀನನ್ನು 5 ಜನ ಹಂಚಿಕೊಂಡಿದ್ದರು. ಹಾಗೂ ಅಧಿಕೃತ ಪಾಲು ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದರು. ಮಾರ್ಚ್ 12 ರಂದು ಜಮೀನು ಪಾಲು ವಿಭಾಗ ವಿಚಾರವಾಗಿ ಮಹಿಳೆಯರ ನಡುವೆ ರಸ್ತೆ ಮಧ್ಯೆಯೇ ಜಗಳ ನಡೆದು, ಮಂಜಮ್ಮ (30) ಎಂಬುವರ ಮೇಲೆ ಸುಮಾ, ನೀಲಮ್ಮ, ವಿಶಾಲಾಕ್ಷಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದರು. ನಂತರ ಹಲ್ಲೆಗೊಳಗಾಗಿದ್ದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲದೆ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪರಶುರಾಂಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಇಂದು ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಪರಶುರಾಂಪುರ ಪಿಎಸ್‌ಐ ಚಂದ್ರಶೇಖರ ಪಕರಣವನ್ನು ಗಣನೆಗೆ ತಗೆದುಕೊಂಡು ತನಿಖೆ ಮುಂದುವರೆಸಿದ್ದಾರೆ.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post