ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಕೋವಿಡ್ ಎರಡನೆ ಅಲೆ ಬಾರಿ ಅಪಾಯಕಾರಿಯಾಗಿದ್ದು, ಬೇರೆ ಬೇರೆ ರೂಪಾಂತರ ತಾಳಿದೆ. ಇದರಿಂದ ಹಲವರು ರೋಗಕ್ಕೆ ತುತ್ತಾಗುತ್ತಿದ್ದಾರೆ. ತಾಲೂಕು ಜನರು ತುಂಬ ಎಚ್ಚರಿಕೆ ವಹಿಸಬೇಕು ಎಂದು ಪೋಲೀಸ್ ಇನ್ಸ್‌ಪೆಕ್ಟರ್ ಜಿ. ತಿಪ್ಪೇಸ್ವಾಮಿ ತಿಳಿಸಿದರು.
ಸಂಜೀವಿನಿ ಜೀವರಕ್ಷಕ ಟ್ರಸ್ಟ್ ಮತ್ತು ಚಳ್ಳಕೆರೆ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೊರೋನಾ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತಿವೇಗವಾಗಿ ಕೋರೋನಾ ಹಬ್ಬುತ್ತಿರುವ ತಾಲ್ಲೂಕು ಚಳ್ಳಕೆರೆ. ಈ ತಾಲೂಕಿನಲ್ಲಿ ಹಳ್ಳಿ ಹಳ್ಳಿಗಳಿಗೂ ಕೊರೋನಾ ವ್ಯಾಪಕವಾಗಿ ಹಬ್ಬಲು ಪ್ರಾರಂಭಿಸಿದೆ. ಇತಂಹ ಸಮಯದಲ್ಲಿ ನಾಗರೀಕರು ಜಾಗೃತರಾಗಿರದಿದ್ದರೆ, ಸಾವಿನ ಸಂಖ್ಯೆ ಹೆಚ್ಚುತ್ತದೆ. ನಮ್ಮ ಇಲಾಖೆ ವತಿಯಿಂದ ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದು ಸಾರ್ವಜನಿಕರು ಅರ್ಥಮಾಡಿಕೊಳ್ಳಬೇಕು. ಕೊರೋನ ಸೋಂಕಿನಿಂದ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.
ಸಂಜೀವಿನ ಟ್ರಸ್ಟ್‌ನ ವತಿಯಿಂದ ಇಂತಹ ಜಾಗೃತಿ ಕಾರ್ಯಕ್ರಮವನ್ನು ಮಾಡುತ್ತಿರುವುದು ಶ್ಲಾಘನೀಯ. ಈ ಟ್ರಸ್ಟ್‌ನ ಯುವಕರು ಕೋರೋನಾ ಕುರಿತ ಜಾಗೃತಿ ಚಿತ್ರಗಳನ್ನು ಬಿಡಿಸಿದ್ದು, ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇವರಕಾರ್ಯಕ್ಕೆ ನಮ್ಮ ಇಲಾಖೆ ಬೆಂಬಲವು ಸಹ ಇರುತ್ತದೆ ಎಂದರು.
ಟ್ರಸ್ಟ್‌ನ ರಾಜ್ಯಾಧ್ಯಕ್ಷ ರಂಗಸ್ವಾಮಿ ಮಾತನಾಡಿ, ಕೊರೋನಾ ವ್ಯಾಪಕವಾಗಿ ಹಬ್ಬುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಕೊರೋನಾ ವಾರಿಯರ್ಸ್‌ಗಳು ತಮ್ಮ ಜೀವದ ಹಂಗನ್ನು ತೊರೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ಇತಂಹ ಸಮಯದಲ್ಲಿ ಮನೆಯಿಂದ ಯಾರು ಹೊರಬರದಂತೆ ಲಾಕ್ ಡೌನ್ ಮಾಡಲಾಗಿದ್ದು, ಇದನ್ನು ಕಟ್ಟಿನಿಟ್ಟಿನಲ್ಲಿ ಪಾಲಿಸಬೇಕು ಹಾಗೂ ಮನೆಯಲ್ಲೇ ಇದ್ದು ಕೋರೊನಾದಿಂದ ತಮ್ಮ ಜೀವವನ್ನು ಕಾಪಾಡಿಕೊಳ್ಳಿ. ನಗರಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ತನ್ನ ವೇಗವನ್ನು ಹೆಚ್ಚಿಸಿದ್ದು, ಪ್ರತಿಯೊಬ್ಬರು ಜಾಗೃತರಾಗಿರಿ ಎಂದರು.
ನಗರದ ಅಂಬೇಡ್ಕರ್ ವೃತ್ತದಿಂದ ಹೋರಟ ಜಾಥಾ ನೆಹರು ವೃತ್ತ ಬಳಸಿ ಪಾವಗಡ ಮುಖ್ಯರಸ್ತೆ, ಬೆಂಗಳೂರು ಮುಖ್ಯರಸ್ತೆ ಬಳ್ಳಾರಿ ರಸ್ತೆಗಳಲ್ಲಿ ಸಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶಗೌಡ, ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಪೌರಾಯುಕ್ತ ಪಿ. ಪಾಲಯ್ಯ, ಪಿಎಸ್‌ಐ ಮಂಜುನಾಥ ಅರ್ಜನ್ ಲಿಂಗಾರೆಡಿ, ನಗರಸಭೆ ಅರೋಗ್ಯಾಧಿಕಾರಿಗಳಾದ ಮಹಾಲಿಂಗಪ್ಪ ದಾದಪಿರ್, ಗಣೇಶ, ಸಂಜೀವಿನಿ ಜೀವರಕ್ಷಕ ಟ್ರಸ್ಟ್ ಅಧ್ಯಕ್ಷ ಮುಕ್ತಿಯರ್, ತಾಲೂಕು ಉಪಾಧ್ಯಕ್ಷ ವಾಸಿಂ ಅಕ್ರಂ, ರಾಜ್ಯ ಸಮಿತಿ ಸದಸ್ಯ ಶಶಿಧರ ಮತ್ತು ಸಂಜೀವಿನಿಯ ಸದಸ್ಯ ಕಾಟೇಶ್, ಶರತ್, ಬಾಬಾ ಫಕ್ರುದ್ದಿನ್ ಮುಸ್ತಾಕ್, ಮುಬಾರಕ್, ಹನೀಫ್ ಮನ್ಸೂg, ಐಯಾನ್, ಜುನೈದ್ ವಸಿಮ್, ವಿದ್ಯಾರ್ಥಿ ಪರಿಷತ್‌ನ ಸದಸ್ಯರಾದ ಭಾನುಪ್ರಕಾಶ್ ಜಾಗೃತಿ ಜಾಥಾದಲ್ಲಿ ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post