ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಕರ್ನಾಟಕ ಎಂದು ಮರುನಾಮಕರಣಗೊಂಡ ಅವಧಿಯಲ್ಲಿ ಡಿ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು ಎಂದು ಶಾಸಕ ಟಿ. ರಘುಮೂರ್ತಿ Challakere MLA Raghumurthy ಅವರು ಹೇಳಿದರು.
ನಗರದ ಹೊರವಲಯದಲ್ಲಿ ಪಾವಗಡ ರಸ್ತೆ ಶಿಲ್ಪ ನಿರ್ಮಾಣವಾಗಿರುವ ಹಿಂದುಳಿದ ವರ್ಗಗಳ ಸಂಕಿರಣ ಮುಂಭಾಗದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ ಹಮ್ಮಿಕೊಂಡಿದ್ದ ಡಿ ದೇವರಾಜು ಅರಸು ಅವರ 107ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ದೇವರಾಜ ಅರಸು ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಸಭೆ ಕಾರ್ಯಕ್ರಮದ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ಡಿ ದೇವರಾಜ ಅರಸು ಅವರ ಅದಿಕಾರಾವಧಿಯಲ್ಲಿ ಅನೇಕ ಜನಪರ ಕಾರ್ಯಗಳನ್ನು ಜಾರಿಗೆ ತಂದವರು ಭೂ ಸುಧಾರಣೆ & ಉಳುವವನೇ ಹೊಲದೊಡೆಯ ಕಾನೂನುಗಳನ್ನು ಜಾರಿಗೆ ತಂದರು. ಇವರ ಜನ್ಮ ಶತಮಾನೋತ್ಸವವನ್ನು 2015 ಅಕ್ಟೋಬರ್ 20 ರಿಂದ ಒಂದು ವರ್ಷದ ಕಾಲ ಕರ್ನಾಟಕ ಸರ್ಕಾರವು ಆಚರಿಸಿತು. ಇವರು ಮೈಸೂರು ಜಿಲ್ಲೆಯ ಹುಣುಸೂರು ತಾಲ್ಲೂಕಿನ್ ಕಲ್ಲಹಳ್ಳಿ ಗ್ರಾಮದವರಾಗಿದ್ದು, ಜನ್ಮ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಇವರು ಜನಿಸಿದ ಗ್ರಾಮವನ್ನು ದತ್ತು ಗ್ರಾಮವಾಗಿ ಸ್ವೀಕರಿಸಿತು. ಇವರ ಅಧಿಕಾರಾವಧಿಯಲ್ಲಿ ರಾಷ್ಟ್ರಪತಿ ಆಡಳಿತವು 2ನೇ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ಬಂದಿತು. ಇವರು 1976 ರಲ್ಲಿ ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣ ಮಾಡಲು ಶಿಲಾನ್ಯಾಸ ಮಾಡಿದರು.
Also read: ಮತ್ತೆ ಮಳೆ ಆರಂಭ: ಕರಾವಳಿ ಸೇರಿ ಹಲವು ಕಡೆ ಯೆಲ್ಲೋ ಅಲರ್ಟ್, ಶಿವಮೊಗ್ಗದ ಪರಿಸ್ಥಿತಿಯೇನು?
ಎಲೆಕ್ಟ್ರಾನಿಕ್ ಸಿಟಿ ಪರಿಕಲ್ಪನೆಯು ರಾಮಕೃಷ್ಣ ಬಾಳಿಗಾ ಅವರದ್ದಾಗಿದ್ದು. ಆರ್ ಕೆ ಬಳಿಗಾ ಅವರನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಪಿತಾಮಹ ಎಂದು ಕರೆಯುತ್ತಾರೆ. ಭಕ್ತಿ ಯುಗದ ಪ್ರಭಾವ ಹರಿದಾಸರುಗಳ ಪ್ರವೇಶ ಕರೆದುಕೊಂಡು ಹೊಸರೂಪ ಪಡೆದಾಗ ಯಕ್ಷಗಾನವು 20ನೇ ಶತಮಾನದ ಶತಮಾನದ ಉತ್ತರಾರ್ಧದಲ್ಲಿ ಬೇರೊಂದು ತಿರುವನ್ನು ಪಡೆದುಕೊಳ್ಳುವುದಕ್ಕೆ ಮಸೂದೆ ಕಾರಣವಾಯಿತು ಇಂತಹ ಮಹನೀಯರ ಕೊಟ್ಟಂತಹ ಕೊಡುಗೆಗಳು ಹಿಂದುಳಿದ ವರ್ಗಕ್ಕೆ ಅನುಕೂಲವಾಗಿದೆ ಇಂತಹ ಅನುಕೂಲಗಳನ್ನು ಬಳಸಿಕೊಂಡು ಮಕ್ಕಳು ಎತ್ತು ಶಿಕ್ಷಣಕ್ಕೆ ಮಹತ್ವ ನೀಡಬೇಕು ಶಿಕ್ಷಣವೇ ಶಕ್ತಿ ಶಿಕ್ಷಣ ಇದ್ದರೆ ಅದರ ಹಿಂದೆ ಎಲ್ಲ ಇದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತಹಶೀಲ್ದಾರ್ ಎನ್ ರಘುಮೂರ್ತಿ ಮಾತನಾಡಿ, ರಾಜ್ಯದ ಮಾಜಿ ಮುಖ್ಯಮಂತ್ರಿ ದಿವಂಗತ ದಿ.ದೇವರಾಜ ಅರಸು ಅವರು ತಮ್ಮ ಆಡಳಿತಾವಧಿಯಲ್ಲಿ ರಕ್ತ ರಹಿತ, ಮೌನ ಕ್ರಾಂತಿಯ ಮೂಲಕ ಕನ್ನಡ ನಾಡಿನ ಭೂರಹಿತರಿಗೆ 7 ಲಕ್ಷ ಹೆಕ್ಟೇರ್ ಭೂಒಡೆತನ ನೀಡುವ ಮೂಲಕ ಇಂದಿಗೂ ಜನ ಮಾನಸದಲ್ಲಿ ಪ್ರಾತಃ ಸ್ಮರಣೀಯರಾಗಿದ್ದಾರೆ ಎಂದರು.
ಈ ಸಮಯದಲ್ಲಿ ನಗರಸನಭೆ ಅಧ್ಯಕ್ಷೆ ಸುಮಕ್ಕ ಉಪಾಧ್ಯಕ್ಷರಾದ ಮಂಜುಳ ಆರ್ ಪ್ರಸನ್ನಕುಮಾರ್, ತಹಶೀಲ್ದರ್ ಎನ್. ರಘುಮೂರ್ತಿ ನಗರಸಭೆ ನಾಮನಿರ್ದೇಶನ ಸದಸ್ಯರಾದ ಜಗದಾಂಭ, ಟಿಎಪಿಎAಸಿ ಅಧ್ಯಕ್ಷರಾದ ಕೆ.ಟಿ.ನಿಜಲಿಂಗಪ್ಪ,ನಗರAಗೆರೆ ಗ್ರಾಮಪಂಚಾಯಿತಿ ಸದಸ್ಯ ಮಂಜುನಾಥ, ಇಓ.ಜಿ.ಕೆ ಹೊನ್ನೆಯ, ಬಿಇಓ, ಕೆ.ಎಸ್. ಸುರೇಶ, ಸಾಮಾಜಿಕ ವಲಯ ಅರಣ್ಯಾಧಿಕಾರಿ, ಕೃಷಿ ಅಧಿಕಾರಿ ಅಶೋಕ, ರೇಷ್ಮೆ ಇಲಾಖೆ ಅಧಿಕಾರಿ ಕೆಂಚಾಜಿರಾವ್, ಹಿಂದೂಳಿದ ವರ್ಗಗಳ ಕಲ್ಯಾಧಿಕಾರಿ ಜಿ.ಟಿ. ಜಗನ್ನಾಥ್. ಸೇರಿದಂತೆ ಅಧಿಕಾರಿಗಳು ಸಿಬ್ಬಂದಿ ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post