ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಅರ್ಜಿದಾರರು, ರೈತರು ವಿಕಲಚೇತನರು .ಸಾರ್ವಜನಿಕರು ತನ್ನ ಕಾರ್ಯ ಸಲುವಾಗಿ ಕಚೇರಿಗೆ ಬಂದಾಗ ವಿಳಂಬ ಮಾಡದೆ ಅವರ ಕೆಲಸಗಳನ್ನು ತಪ್ಪದೆ ಮಾಡಿಕೊಡಿ, ಪದೇ ಪದೇ ಕಚೇರಿಗೆ ಅಲೆಸುವ ಬದಲಾಗಿ ಅರ್ಜಿ ಬಂದ ತಕ್ಷಣವೇ ಕೆಲಸ ಮಾಡಿಕೊಡಬೇಕು ಎಂದು ಎಸಿಬಿ ಡಿವೈಎಸ್’ಪಿ ಬಸವರಾಜ್ ಹೇಳಿದರು.
ತಾಲೂಕು ತಳಕು ಗ್ರಾಮದ ವೆಂಕಣ್ಣಯ್ಯ ಸ್ಮಾರಕ ಗ್ರಂಥಾಲಯದ ಆವರಣದಲ್ಲಿ ಭ್ರಷ್ಟಾಚಾರ ನಿಗ್ರಹದಳ ಇಲಾಖೆ ವತಿಯಿಂದ ಹೋಬಳಿ ಮಟ್ಟದ ಜನ ಸಂಪರ್ಕ ಸಭೆಯಲ್ಲಿ ಆಧಿಕಾರಿ ಮತ್ತು ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಅತಿ ಹೆಚ್ಚು ಜನ ಸೇವೆ ಕಲ್ಪಿಸಬೇಕಾದದ್ದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಸಾವಿರಾರು ಸಮಸ್ಯೆಗಳು ಉದ್ಬವಿಸುತ್ತವೆ ಪ್ರತಿ ತಿಂಗಳು ಕಡ್ಡಾಯವಾಗಿ ಗ್ರಾಮಪಂಚಾಯಿತಿಗಳಲ್ಲಿ ಸಭೆಯನ್ನು ಏರ್ಪಡಿಸಿ ಜನರ ಸಮಸ್ಯಗಳನ್ನು ಆಲಿಸಿಬೇಕಾಗುತ್ತದೆ. ನಂತರ ಗ್ರಾಮ ಲೆಕ್ಕಿಗರು ಸಹ ಜಮೀನು ವಿಷಯವಾಗಿ ಅವರ ಕಾರ್ಯಗಳನ್ನು ತಡ ಮಾಡದೆ ಬಗೆಹರಿಸಬೇಕು. ಅಧಿಕಾರಿಗಳು ಸಮಯ ಕಳೆಯದಂತೆ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದರು.
ಅಧಿಕಾರಿಗಳು ನಿಮಗೂ ಸಹ ಹಲವರಿಂದ ಬೆದರಿಕೆ ಬರಬಹುದು. ಇಂತಹ ಬೆದರಿಕೆಗಳು ಬಂದಾಗ ಎದೆಗುಂದದೆ ನಮ್ಮ ಇಲಾಖೆಗಳಿಗೆ ಮಾಹಿತಿ ನೀಡಬಹುದು. ಹಾಗಾಗಿ ಅಧಿಕಾರಿಗಳು ಎಚ್ಚರಿಕೆಯಿಂದ ಜಾಗರೂಕರಾಗಿ ಪ್ರಾಮಾಣಿಕವಾಗಿ ತ್ವರಿತವಾಗಿ ಕಾರ್ಯನಿರ್ವಹಿಸಬೇಕಾಗುತಹ ಮಿತಿಮೀರಿದ ಭ್ರಷ್ಟಾಚಾರಕ್ಕೆ ನಾಗರಿಕರೇ ಹೊಣೆಗಾರರು. ಸಮಾಜದ ಈ ವ್ಯವಸ್ಥೆ ಬದಲಾಗದಿದ್ದರೆ ಮುಂದಿನ ಪೀಳಿಗೆ ಸಂಕಷ್ಟದಲ್ಲಿ ಬದುಕನ್ನು ಸಾಗಿಸಬೇಕಾದೀತು ಎಂದು ಎಚ್ಚರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post