ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕಾಗಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ಮೋಹನ್‌ದಾಸ್ ನೀಡಿರುವ ವರದಿಯನ್ನು ಕೂಡಲೆ ಜಾರಿಗೊಳಿಸಲು ಆಗ್ರಹಿಸಿ ಚಳ್ಳಕೆರೆಯಲ್ಲಿ ಭಾರೀ ಬೃಹತ್ ಪ್ರತಿಭಟನಾ ಹೋರಾಟ ನಡೆಸಲಾಯಿತು
ವರದಿ ಜಾರಿಗಾಗಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಶ್ರೀಗಳ 100ನೆಯ ದಿನದ ಅಹೋರಾತ್ರಿ ಧರಣಿಯ ಬೆಂಬಲಿಸಿ ಚಳ್ಳಕೆರೆ ನಗರದಲ್ಲಿ ಈ ನಾಡು ಹಿಂದೆಂದೂ ಕಂಡರಿಯದ ಬೃಹತ್ ಹೋರಾಟಕ್ಕೆ ತಾಲೂಕಿನ ಸಮಸ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರು ಪಕ್ಷಾತೀತ ಹಾಗೂ ಜಾತ್ಯತೀತವಾಗಿ, ಜೊತೆಗೆ ನಾಗರೀಕರು ಈ ಪ್ರತಿಭಟನಾ ಹೋರಾಟದಲ್ಲಿ ಸಾಕ್ಷಿಯಾಗಿದ್ದರು.
ಚಳ್ಳಕೆರೆಯ ಚಿತ್ರದುರ್ಗ ರಸ್ತೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮೀಪದ ಡಾ. ಜಗಜೀವನರಾಂ ಪ್ರತಿಮೆ ಮುಂಭಾಗದಿಂದ ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ಶ್ರೀ ವೀರಭದ್ರಸ್ವಾಮಿ ದೇವಾಲಯದ ರಾಜ ಬೀದಿಗಳಲ್ಲಿ ಘೋಷಣೆಗಳನ್ನು ಕೂಗುತ್ತಾ, ಜೈಕಾರ ಮೊಳಗಿಸುತ್ತಾ ಮೀಸಲಾತಿ ಹೋರಾಟಕ್ಕೆ ಬೆಂಬಲಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟಕ್ಕೆ ಇಂದು ಬೃಹತ್ ಪ್ರತಿಭಟನೆಯ ಮೂಲಕ ಚಳ್ಳಕೆರೆ ನಗರವನ್ನು ಸ್ವಯಂ ಘೋಷಿತ ಬಂದ್ ಮಾಡಲಾಗಿತ್ತು.
ಮೀಸಲಾತಿ ಹೋರಾಟದಲ್ಲಿ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಹಲವು ದಿನಗಳಿಂದ ನಮ್ಮ ಹಕ್ಕನ್ನು ಕೇಳಿಕೊಂಡು ಬಂದಿದ್ದು ಇದಕ್ಕೆ ಸರ್ಕಾರ ಯಾವುದೇ ರೀತಿಯ ಸ್ಪಂದಿಸದೆ ಇರುವುದು ನೋವು ತಂದಿದೆ. ರಾಜ್ಯದಲ್ಲಿ ಸಮುದಾಯಕ್ಕೆ ಮೀಸಲಾತಿ ಕೊಡಲೇಬೇಕು. ಅದು ನಮ್ಮ ಹಕ್ಕು ನಮ್ಮ ಸ್ವಾಮೀಜಿಯವರು ಹಕ್ಕಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ಸಹ ಅವರ ಪ್ರತಿಭಟನೆಗೆ ಬೆಂಬಲವಾಗಿ ಇಂದು ಪ್ರತಿಭಟನೆಯನ್ನು ನಡೆಸಿದ್ದೇವೆ. ನಾವು ಕೇಳುತ್ತಿರುವುದು ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ ನಾಗಮೋಹನದಾಸ್ ವರದಿಯನ್ನು ಕೊಟ್ಟಿದ್ದಾರೆ. ಪರಿಶಿಷ್ಟ ಜಾತಿಗೆ ಈಗ ಇರುವ ೧೫ ಮೀಸಲಾತಿಯನ್ನು 17 ಪಸೆರ್ಂಟ್ ಹೆಚ್ಚಿಸಬೇಕು ಎಂದರು.
ಪರಿಶಿಷ್ಟ ಪಂಗಡಕ್ಕೆ 3 ಇದನ್ನು 7.5 ಹೆಚ್ಚಿಸಿ ಎಂದು ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಈಗಿರುವ ಸರ್ಕಾರ ಯಾವಾಗ ಚುನಾವಣೆ ಬರುತ್ತದೆ. ಈ ಸಂದರ್ಭಗಳಲ್ಲಿ ಸುಳ್ಳು ಭರವಸೆಗಳನ್ನು ನೀಡುತ್ತಾರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮತಗಳನ್ನು ಪಡೆಯುವುದಕ್ಕೆ ಬೇರೆಬೇರೆ ಆಶ್ವಾಸನೆಗಳನ್ನು ನೀಡುತ್ತಾರೆ. ನಮ್ಮ ಸರ್ಕಾರ ಬಂದರೆ 24 ಗಂಟೆಗಳಲ್ಲಿ ಅದನ್ನು ಜಾರಿ ಮಾಡುತ್ತೇವೆ ಹೇಳುತ್ತಾರೆ. ಆದರೆ ಇಲ್ಲಿಗೆ ಮೂರು ವರ್ಷವಾದರೂ ವರದಿ ನೀಡಿ 20 ತಿಂಗಳಾದರೂ ನಿರ್ಲಕ್ಷ ಮಾಡುತ್ತಿದ್ದಾರೆ. ಈ ಹೋರಾಟ ಹಿಂದೆ ಪ್ರಾರಂಭವಾಗಿಲ್ಲ. ಸುಮಾರು 40 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ವಾಲ್ಮೀಕಿ ಸ್ವಾಮಿ ಮಠದಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳು ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಸಂವಿಧಾನ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಅಧಿಕಾರ ಅವರಿಗೆ ಇರುವುದು ಶಾಶ್ವತವಾಗಿ ನಾವು ಅಧಿಕಾರದಲ್ಲಿ ಇರಬೇಕು ಎನ್ನುವುದೇ ಅವರ ಆಸೆಯಾಗಿದೆ ಯಾವ ಧರ್ಮ ಎಲ್ಲ ಒಂದೇನೆ ಧರ್ಮ ಎನ್ನುತ್ತಾರೆ. ಏನೇ ಮಾಡಿದರೂ ಸರ್ಕಾರಕ್ಕೆ ಅನುಕೂಲವಾಗುವಂತಹ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಜನಸಾಮಾನ್ಯರಿಗೆ ಎಲ್ಲವೂ ಅರ್ಥವಾಗುತ್ತದೆ ನಾವು ನಮ್ಮ ಹಕ್ಕು ಕೊಡಿ ವರೆಗೂ ಹೋರಾಟ ನಡೆಸುತ್ತೇವೆ ಎಂದರು.
ಜೆಡಿಎಸ್ ನಿಯೋಜಿತ ಅಭ್ಯರ್ಥಿ ಎಂ. ರವೀಶ್ ಕುಮಾರ್, ಪಕ್ಷತೇರ ಅಭ್ಯರ್ಥಿ ಕೆ.ಟಿ. ಕುಮಾರಸ್ವಾಮಿ, ರೈತ ಮುಖಂಡ ಕೆ.ಪಿ. ಭೂತಯ್ಯ, ಬಿ.ಪಿ. ಪ್ರಕಾಶ್ ಮೂರ್ತಿ, ಸೌಭಾಗ್ಯಮ್ಮ, ಪ್ರಕಾಶ್, ಸಮರ್ಥರಾಯ್, ಮಾತನಾಡಿದರು.
ಅಧ್ಯಕ್ಷರಾದ ಸುಮಕ್ಕ, ಉಪಾಧ್ಯಕ್ಷರಾದ ಮಂಜುಳ, ಪ್ರಮುಖರಾದ ಪ್ರಸನ್ ಕುಮಾರ್, ವೀರಭದ್ರಯ್ಯ, ಕವಿತಾ ಬೋರಯ್ಯ, ವಿವಿಧ ಪಕ್ಷದ ಮುಖಂಡರು, ಸಂಘ ಸಂಸ್ಥೆಯ ಪದಾಧಿಕಾರಿಗಳು ಇತರ ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post