ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ತಾಲೂಕಿನ ನಾಗಪ್ಪನಹಳ್ಳಿ ಗೇಟ್ ಬಳಿ ಅಕ್ರಮವಾಗಿ ಒಣಗಾಂಜಾ ಸಂಗ್ರಹಿಸಿದ್ದ ವ್ಯಕ್ತಿಯ ಮೇಲೆ ಅಬಕಾರಿ ಇನ್ಸ್‌ಪೆಕ್ಟ್ ಕೃಷ್ಣಸ್ವಾಮಿ ನೇತೃತ್ವದಲ್ಲಿ ದಾಳಿ ನಡೆಸಿ 670 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಯಿತು.
ಶ್ರೀನಿವಾಸ್ (40) ಎಂಬಾತ ಮಾರಾಟ ಮಾಡುವ ಉದ್ದೇಶದಿಂದ ಒಣ ಗಾಂಜಾವನ್ನು ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಅಪಕಾರಿ ಉಪಆಯುಕ್ತ ಆರ್. ನಾಗಶಯನ್ ಮಾರ್ಗದರ್ಶನಲ್ಲಿ ದಾಳಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಆರೋಪಿಯು ಒಟ್ಟು 670ಗ್ರಾಂ ಒಣ ಗಾಂಜಾ ಸಂಗ್ರಹಿಸಿದ್ದು ಕಂಡುಬಂದಿದ್ದು, ಎನ್‌ಡಿಪಿಎಸ್ ಕಾಯ್ದೆ 1985ರ ಅನ್ವಯ ಶಿಕ್ಷಾರ್ಹ ಅಪರಾಧವಾಗಿರುವುದರಿಂದ ಕೃತ್ಯಕ್ಕೆ ಬಳಸಲಾದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದಾಳಿ ಸಂದರ್ಭದಲ್ಲಿ ಅಬಕಾರಿ ಸಬ್‌ಇನ್ಸಪೆಕ್ಟರ್ ನಾಗರಾಜ, ಸಿಬ್ಬಂದಿಗಳಾದ ಶಾಂತಣ್ಣ, ರಘು, ನಾಗರಾಜ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post