ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಕೊರೋನಾ ವಾರಿಯರ್‍ಸ್‌ಗಳಿಗಾಗಿ ಚಳ್ಳಕೆರೆ ಶಾಸಕ ರಘುಮೂರ್ತಿ ಅನ್ನದಾಸೋಹ ಕಾರ್ಯಕ್ರಮ ನಡೆಸುತ್ತಿದ್ದು, ಸುಮಾರು 200ಕ್ಕೂ ಹೆಚ್ಚು ಜನ ಇದರ ಲಾಭಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಕೊರೋನಾ ಎರಡನೆಯ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್ ಡೌನ್ ನಿಯಮ ಜಾರಿಯಲ್ಲಿದ್ದು, ನಗರದಲ್ಲಿ ಅಂಗಡಿ, ಹೋಟೆಲ್‌ಗಳನ್ನು ಮುಚ್ಚಲಾಗಿದೆ. ಕೊರೋನಾ ವಾರಿಯರ್‍ಸ್ ಆಗಿ ಕಾರ್ಯನಿರ್ವಹಿಸುವ ಸಿಬ್ಬಂದಿ, ಅಧಿಕಾರಿಗಳು ಹೋಂ ಗಾರ್ಡ್‌ಗಳು, ಆಶಾ ಕಾರ್ಯಕರ್ತರು, ಆರೋಗ್ಯ ಸಹಾಯಕಿಯರು ಮಧ್ಯಾಹ್ನನದ ಊಟಕ್ಕೆ ಅನುಕೂಲವಾಗಲೆಂದು ಚಳ್ಳಕೆರೆ ಶಾಸಕರಾದ ಟಿ. ರಘುಮೂರ್ತಿ ತಮ್ಮ ಸ್ವ ಇಚ್ಚೆಯಿಂದ ಅನ್ನ ದಾಸೋಹಕ್ಕೆ ಏರ್ಪಾಡು ಮಾಡಿಸಿದ್ದಾರೆ.
ಸುಮಾರು ಏಳು ವರ್ಷಗಳ ಕಾಲ ಹಸಿದು ಬಂದವರಿಗೆ ಇಲ್ಲವೆಂಬವಂತೆ ಅನ್ನ ದಾಸೊಹ ಮಾಡಿಕೊಂಡು ಬಂದಿದ್ದ ಅವರು ಕೊರೋನಾ ಸಮಯದಲ್ಲಿ ಸ್ವಲ್ಪ ದಿನಾ ಮಾತ್ರ ಊಟ ನೀಡುವುದನ್ನು ನಿಲ್ಲಿಸಿದ್ದರು. ಯಾವಾಗ ಕೋರೋನಾ ಅಟ್ಟಹಾಸಕ್ಕೆ ಇಳಿಯಿತೋ ಅಲ್ಲಿಂದ ಸರ್ಕಾರ್ ಲಾಕ್ ಡೌನ್ ನಿಯಮವನ್ನು ಜಾರಿಗೆ ತಂದಿತು. ಇತಂಹ ಸಮಯದಲ್ಲಿ ಶಾಸಕರು ಮತ್ತೆ ಅನ್ನ ದಾಸೋಹಕ್ಕೆ ಚಾಲನೆ ನೀಡಿದರು. ಇಲ್ಲಿಗೆ ಲಾಕ್ ಡೌನ್ ಆಗಿ ಹದಿಮೂರು ದಿನವಾಗಿದೆ. ನಿತ್ಯ ಸುಮಾರು ೨೦೦ ರಿಂದ ನಾಲ್ಕು ನೂರು ಜನ ಊಟ ಮಾಡುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post