ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಫಲಾನುಭವಿಗಳಿಗೆ ತಾಲೂಕಿನ 210 ಅಂಗವಿಕಲರಿಗೆ ವಿವಿಧ ಸಾಧನಗಳನ್ನು ವಿತರಿಸಲಾಯಿತು.
ಕಸಬ ವಲಯ ಗಾಂಧಿನಗರದಲ್ಲಿ ಅಂಗವಿಕಲರಿಗೆ ವಿಕಲಚೇತನ ಸೈಕಲ್ ವಿತರಿಸಿದ ಶ್ರೀಕ್ಷೇತ್ರ ಗ್ರಾಮೀಣಾಭಿವೃದ್ದಿ ಯೋಜನೆ ವಲಯದ ಮೇಲ್ವಿಚಾರಕಿ ಉಮಾ ಸತೀಶ ಮಾತನಾಡಿ, ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಆಸೆಯಂತೆ ಅಂಗವಿಕಲರಿಗೆ ಅನುಕೂಲವಾಗಲು ಹಲವು ಸಾಧನೆಗಳನ್ನು ಚಳ್ಳಕೆರೆ ತಾಲೂಕಿನ ಸುಮಾರು 210 ವಿಕಲಚೇತನರಿಗೆ ವಿಲ್ ಚೇರ್, ಕಮೋಡ್ ವಿಲ್ ಚೇರು, ಯೂ ಆಕಾರದ ನಡಗೆಯ ಕೋಲು, ನಡೆಯುವ ಕೋಲು, ವಾಟರ್ ಬೆಡ್ ಇತರ ಸಾಧನಗಳನ್ನು ಅವರ ಮನೆ ಮನೆಗೆ ಹೋಗಿ ವಿತರಿಸಲಾಗಿದೆ ಎಂದರು.

(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get in Touch With Us info@kalpa.news Whatsapp: 9481252093





Discussion about this post