ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣಾ ಬಿರುಸುಗೊಂಡಿದ್ದು, ಚಿತ್ರದುರ್ಗ ಜಿಲ್ಲೆಯಿಂದ ೯ ಜನ ಕಣದಲಿದ್ದಾರೆ. ಮತ ಯಾಚನೆಯಲ್ಲಿ ತೊಡಗಿರುವ ಗಡಿನಾಡು ಅಭ್ಯರ್ಥಿ ಕೊರ್ಲಕುಂಟೆ ತಿಪ್ಪೇಸ್ವಾಮಿ ವಿಭಿನ್ನವಾಗಿ ಮತ ಯಾಚನೆಗೆ ಮುಂದಾಗಿದ್ದಾರೆ.
ಅಂಚೆ ಪತ್ರಗಳ ಮೂಲಕ ಮತದಾರರಿಗೆ ತನಗೆ ಮತಹಾಕಿ ಎಂಬ ಪ್ರಾರ್ಥನೆಯ ಜvಗೆ ಅವರೇ ಕೈಯಾರೆ ಸಹಿ ಮಾಡಿದ ಹಸ್ತಾಕ್ಷರವಿರುತ್ತದೆ. ಅವರೇ ಹೇಳುವಂತೆ, ಇವೆಲ್ಲ ಪತ್ರಗಳನ್ನೂ ಸ್ವತಃ ಅವರೇ ಅಂಚೆ ಡಬ್ಬಿಗೆ ಹಾಕುವ ಮೂಲಕ ಮತಯಾಚನೆ ಮಾಡುತ್ತಿದ್ದಾರೆ.
ತಾಲೂಕಿನ ಚಳ್ಳಕೆರೆಯ ತ್ಯಾಗರಾಜ ನಗರದಲ್ಲಿರುವ ಅಂಚೆ ಕಚೇರಿ ಸಾಹಿತ್ಯ ಪ್ರೇಮಿಗಳ ಜೊತೆ ತೆರೆಳಿ ಅಂಚೆ ಪತ್ರದಲ್ಲಿ ಮತದಾರರ ವಿಳಾಸವನ್ನು ಬರೆದು ಗಡಿನಾಡಿನಿಂದ ಬಂದು ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಇನ್ನು ಹೆಚ್ಚಿನ ಕನ್ನಡ ತಾಯಿ ಸೇವೆ ಮಾಡ ಬಯಸಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಚುನಾವಣೆಗೆ ಸ್ಪರ್ಧೆ ಮಾಡಿದ್ದು ದಯವಿಟ್ಟು ತಮ್ಮ ಅಮೂಲ್ಯ ಮತವನ್ನು ನೀಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.
ಈ ಸಮಯದಲ್ಲಿ ನೇತಾಜಿ ಸ್ನೇಹ ಬಳಗದ ಕಾರ್ಯದರ್ಶಿ ಆರ್. ಪ್ರಸನ್ನಕುಮಾರ್ ಮಾತನಾಡಿ, ಗಡಿಗ್ರಾಮದಲ್ಲಿ ಕನ್ನಡದ ಬಗ್ಗೆ ತನ್ನದೆ ಆದ ಒಂದು ಸಂಘವನ್ನು ರಚಿಸಿಕೊಂಡು ಕನ್ನಡ ಸಾಹಿತ್ಯದ ಬಗ್ಗೆ ಹೆಚ್ಚಿನ ಪ್ರಚಾರವನ್ನು ಮಾಡುತ್ತಿರುವ ಜೆ.ತಿಪ್ಪೇಸ್ವಾಮಿ ಇವರಿಗೆ ಕನ್ನಡ ತಾಯಿ ಸೇವೆಗೆ ಒಂದು ಅವಕಾಶ ನೀಡಿಬೇಕು ಎಂದು ಮನವಿ ಮಾಡಿದರು.
ಸಾಹಿತಿ ಟಿ.ಜೆ.ತಿಪ್ಪೇಸ್ವಾಮಿ ಮಾತನಾಡಿ, ಸಾಹಿತಿಗಳಾಗಿ, ಬರಹಗಾರರಾಗಿ, ಕವಿಗಳಾಗಿ ಕನ್ನಡ ಸೇವೆ ಸಲ್ಲಿಸುತ್ತಿರುವ ಗಡಿನಾಡು ಕುಗ್ರಾಮದಿಂದ ತಮ್ಮ ಸಾಹಿತ್ಯಾಸಕ್ತಿ ಇಟ್ಟುಕೊಂಡು. ಜಿಲ್ಲೆಯ ರಂಗ ಮಂದಿರಕ್ಕೆ ತಮ್ಮೂರಿನ ಕವಿಯಾದ ತರಾಸು ಇವರ ಹೆಸರು ಇಡಬೇಕು ಎಂದು ಕೊರ್ಲಕುಂಟೆಯಿಂದ ಚಿತ್ರದುರ್ಗ ಜಿಲ್ಲೆಯವರೆಗೆ ಕಾಲು ನಡಿಗೆ ಮಾಡಿ ರಂಗಂಮದಿರಕ್ಕೆ ತರಾಸು ಎಂದು ನಾಮಕರಣ ಮಾಡುವುದಕ್ಕೆ ಶ್ರಮಿಸಿದ್ದಾರೆ. ಇತಂಹ ಸಾಹಿತ್ಯ ಆಸಕ್ತಿ ಇವರಿಗೆ ಮತ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಷತ್‌ನ ಅಭ್ಯರ್ಥಿ ಕೊರ್ಲಕುಂಟೆ ತಿಪ್ಪೇಸ್ವಾಮಿ, ನಗರಸಭೆ ಮಾಜಿ ಸದಸ್ಯ ಹಾಗೂ ಮುಖಂಡರಾದ ಎಂ.ಶಿವಮೂರ್ತಿ, ಕವಿ ಮೋದೂರು ತೇಜಾ, ಸಾಹಿತಿ ವೈ.ಜಗನಾಥ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲ್ಲೂಕು ಅಧ್ಯಕ್ಷೆ ಡಿ.ಈಶ್ವರಪ್ಪ, ನೇತಾಜಿ ಸ್ನೇಹ ಬಳಗ ಸದಸ್ಯ ಪರೀದ್ ಬಾಷಾ, ಶಿವಸ್ಮಾಮಿ ಇದ್ದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post