ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಕೋವಿಡ್ ವಾರಿಯರ್ಸ್ ಆಗಿ ಹಗಲಿರುಳು ಶ್ರಮಿಸುತ್ತಿರುವವರಿಗೆ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ವತಿಯಿಂದ ಊಟ ಹಾಗೂ ನೀರು ವಿತರಿಸಲಾಯಿತು.
ಕೊರೋನಾ ಎರಡನೆಯ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಲಾಕ್’ಡೌನ್ ಮಾಡಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಇಂತಹ ಸಮಯದಲ್ಲಿ ನಗರದಲ್ಲಿ ಅರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ವೈದ್ಯರು, ಪೋಲೀಸ್ ಸಿಬ್ಬಂದಿಗಳು ಕೊರೋನಾ ವಾರಿಯರ್ಸ್ ಆಗಿ ಬಿಡುವುಲ್ಲದೇ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಸಮಯದಲ್ಲಿ ನಗರದಲ್ಲಿ ಹೊಟೇಲ್ ಇಲ್ಲದೇ ಇರುವುದಿಂದ ನಗರದಲ್ಲಿ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿಯಿಂದ ನಗರದ ಆಸ್ಪತ್ರೆ, ಬಸ್ ನಿಲ್ದಾಣ, ಎಸ್.ಆರ್. ಕಾಂಪ್ಲೆಕ್ಸ್, ತಾಲೂಕು ಕಚೇರಿ ಇತರೆ ಸ್ಥಳಗಳಲ್ಲಿ ಆಹಾರ ಪಟ್ಟಣ ಮತ್ತು ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಲಾಯಿತು.
ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿಯ ಸದಸ್ಯರಾದ ಡಿ.ಟಿ. ಹರೀಶ್, ಜಿ. ವಿಕಾಸ್, ಎಸ್. ಅಂಶುಮಂತ್, ಪಿ. ಗಿರೀಶ್, ಜಿ. ಕೃಷ್ಣ, ಮಂಜುನಾಥ್, ಪ್ರಸನ್ನಕುಮಾರ್ ಸೇರಿದಂತೆ ಹಲವರು ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post