ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಕೊರೋನಾ Corona ಹಿನ್ನೆಲೆಯಲ್ಲಿ ಎರಡು ವರ್ಷ ಶ್ರೀ ಕೃಷ್ಣ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸಲು ಆಗಲಿಲ್ಲ. ಆದರೆ ಈ ವರ್ಷ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಬೇಕಾಗುತ್ತದೆ. ಇದಕ್ಕೆ ಸಮುದಾಯದ ಎಲ್ಲರ ಸಹಕಾರ ಬೇಕು ಎಂದು ಶ್ರೀಕೃಷ್ಣ ಯಾದವ್ ಸಂಘದ ತಾಲೂಕು ಅಧ್ಯಕ್ಷ ರವಿಕುಮಾರ್ ತಿಳಿಸಿದರು.
ಚಳ್ಳಕೆರೆ ನಗರದ ತ್ಯಾಗರಾಜ್ ನಗರದ ಶ್ರೀಕೃಷ್ಣ ಯಾದವ್ ಹಾಸ್ಟೆಲ್‌ನಲ್ಲಿ ಶ್ರೀಕೃಷ್ಣ ಜಯಂತಿ ಕುರಿತು ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಆ.20ರಂದು ಶ್ರೀ ಕೃಷ್ಣ ಜಯಂತೋತ್ಸವ ಕಾರ್ಯಕ್ರಮವನ್ನು ನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಕಳೆದೆರಡು ಬಾರಿ ಕೊರೋನಾ ಕಂಟಕದಿಂದಾಗಿ ಈ ಜಯಂತಿ ಆಚರಣೆ ಮಾಡಲು ಆಗಿರಲಿಲ್ಲ ಆದ ಕಾರಣ ಪ್ರಸ್ತುತ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಸನ್ನದ್ದರಾಗಬೇಕು ಎಂದು ಕರೆ ನೀಡಿದರು.

Also read: ಮಂಚನಬೆಲೆ ಜಲಾಶಯದಿಂದ ನೀರು ಸರಬರಾಜು ಯೋಜನೆಗೆ ಸಂಪುಟ ಒಪ್ಪಿಗೆ: ಸಚಿವ ಎಸ್.ಟಿ. ಸೋಮಶೇಖರ್
ಕೆಎಂಎಫ್‌ನ ನಿರ್ದೇಶಕ ಹಾಗೂ ಸಮುದಾಯದ ಮುಖಂಡರಾದ ವೀರಭದ್ರ ಬಾಬು, ಹಿರಿಯ ಮುಖಂಡರಾದ ಬಿ.ವಿ.ಸಿರಿಯಣ್ಣ, ಹಟ್ಟಿರುದ್ರಪ್ಪ, ಸಂಘದ ಉಪಾಧ್ಯಕ್ಷ ಚಿಕ್ಕಣ್ಣ, ಮುಖಂಡರಾದ ವೆಂಕಟೇಶ ಯಾದವ್, ಚಿತ್ರಾವತಿ ಸಭೆಯಲ್ಲಿ ಮಾತನಾಡಿದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post