ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ನಗರವನ್ನು ಹಸಿರೀಕರಣ ಮಾಡುವ ಉದ್ದೇಶದಿಂದ ನಗರದ ಮುಖ್ಯರಸ್ತೆ, ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಸಾವಿರಾರು ಗಿಡಗಳನ್ನು ಹಾಕಿ ಪೋಷಣೆ ಮಾಡಿದ್ದು ಮಳೆ ಬರುತ್ತಿರುವುದರಿಂದ ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ಮುಂದಿನ ದಿನಗಳಲ್ಲಿ ಈ ನಗರದ ವಲಯ ಅರಣ್ಯಧಿಕಾರಿಯಾಗಿ ರಾಜಶೇಖರ್ ಇಲ್ಲಿಗೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿಯೂ ಸಹ ಉತ್ತಮ ಗಿಡಗಳನ್ನು ಹೆಚ್ಚು ಹೆಚ್ಚು ನೆಟ್ಟು ನಗರವನ್ನು ಹಸಿರುಕರಣದಿಂದ ಕಂಗೊಳಿಸುವಂತೆ ಸಹಕಾರ ನೀಡಿ ಎಂದು ವರ್ಗಾವಣೆಗೊಂಡ ವಲಯ ಅರಣ್ಯಾಧಿಕಾರಿ ಎಸ್. ಸುರೇಶ್ ಹೇಳಿದರು.
ಚಿತ್ರದುರ್ಗ ರಸ್ತೆಯ ವಲಯ ಅರಣ್ಯ ಇಲಾಖೆಯ ಕಚೇರಿಯಲ್ಲಿ ನೂತನ ವಲಯ ಅರಣ್ಯಾಧಿಕಾರಿ ರಾಜಶೇಖರ್ ಇವರಿಗೆ ಸ್ವಾಗತ ಕೋರಿ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ವಲಯ ಅರಣ್ಯಾಧಿಕಾರಿ ಚಂದ್ರಶೇಖರ್, ಚಳ್ಳಕೆರೆ ಬಯಲು ಪ್ರದೇಶವಾಗಿದ್ದು ಈ ಹಿಂದೆ ಅರಣ್ಯ ಇಲಾಖೆಯಿಂದ ಲಕ್ಷಾಂತರ ಗಿಡಗಳನ್ನು ನೆಡಲಾಗಿದೆ. ಮಳೆ ಅಭಾವದಿಂದ ಗಿಡಗಳು ಒಣಗಿವೆ. ಇಲಾಖೆಯೂ ಸಹ ಸಾಕಷ್ಟು ನೀರನ್ನು ಹಾಕಿ ಗಿಡಗಳನ್ನು ಬೆಳಸಿದೆ. ಇಲಾಖೆ ಸಾಲಮರದ ತಿಮ್ಮಕ್ಕ ಹೆಸರಿನ ಒಂದು ಸುಂದರವಾದ ಉದ್ಯಾನವನ ನಿರ್ಮಿಸಿ ನಗರದ ನಾಗರಿಕರು ವಿಶ್ರಮಿಸಿಕೊಳ್ಳುಲು ಸಹಕಾರಿಯಾಗಿದೆ. ಇಲ್ಲಿ ಮಕ್ಕಳಿಗೆ ಹಲವಾರು ಆಟದ ಆಟಿಕೆಗಳು ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಹಲವು ವಸ್ತುಗಳನ್ನು ನಿರ್ಮಿಸಿ ಮಕ್ಕಳಿಗೆ ಹಚ್ಚು ಅನುಕೂಲ ಮಾಡಿಕೊಟ್ಟಿದೆ. ಅದರಂತೆ ಮುಂದಿನ ದಿನಗಳಲ್ಲಿ ಇಲ್ಲಿ ಹಚ್ಚ ಹಸಿರೀಕರಣ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ನಗರಂಗೆರೆ ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಉದ್ಯಾಮಿ ಬಿ.ಸಿ. ಸತೀಶ್ ಕುಮಾರ್ ಚಳ್ಳಕೆರೆ ವಲಯ ಅರಣ್ಯಾಧಿಕಾರಿಯಿಂದ ವರ್ಗವಣೆಗೊಂಡ ಎಸ್. ಸುರೇಶ್ ಮತ್ತು ನೂತನವಾಗಿ ಅಧಿಕಾರಿ ಸ್ವೀಕರಿಸಿದ ರಾಜಶೇಖರ್ ಇವರಿಗೆ ಪುಷ್ಪಮಾಲೆ ಹಾಕಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಚ್.ಎಸ್. ಸೈಯ್ಯದ್. ಸಿದ್ದಾಪುರದ ಶೇಖರ್, ಅಜಮತ್ತುಲ್ಲ, ಸಂಜೀವಪ್ಪ, ಇದಾಯತ್, ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
Get In Touch With Us info@kalpa.news Whatsapp: 9481252093
Discussion about this post