ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಜನ್ಮದಿನ ಕಾರ್ಯಕ್ರಮಗಳನ್ನು ಹೋಟೆಲ್, ರೆಸ್ಟೋರೆಂಟ್ ಅಥವಾ ಸಮಯದಾಯ ಭವನಗಳಲ್ಲಿ ಆಚರಿಸಿಕೊಳುವುದು ಸಾಮಾನ್ಯ. ಆದರೆ ತಾಲೂಕು ಪೋಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತಾವು ಕಾರ್ಯನಿರ್ವಹಿಸುವ ಠಾಣೆಯ ಎದುರು ಅಧಿಕಾರಿ ಹಾಗೂ ಸಿಬ್ಬಂದಿಗಳ ನಡವೇ ಜನ್ಮ ದಿನ ಆಚರಿಸುವ ಪದ್ದತಿಯೊಂದು ನಡೆದುಕೊಂಡು ಬಂದಿರುವುದು ವಿಶೇಷವಾಗಿದೆ.
ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಇಲಾಖಾ ಅಧಿಕಾರಿಗಳಾಲಿ, ಸಿಬ್ಬಂದಿಗಳಾಗಲಿ ಕಚೇರಿ ಮಂದೆ ಮೇಣದ ಬತ್ತಿ ಬೆಳೆಗಿಸಿ, ಕೇಕ್ ಕತ್ತರಿಸಿ ಜನ್ಮದಿನ ಆಚರಿಸುವುದರೊಂದಿಗೆ ಸಂತಸ ಪಡುತ್ತಾರೆ.
ಅದರಂತೆ ತಾಲೂಕು ಠಾಣೆಯ ಮುಖ್ಯಪೇದೆ ಆರ್.ಕೆ. ನಾಗರಾಜ್ ತಮ್ಮ ಜನ್ಮದ ದಿನಾಚರಣೆಯನ್ನು ನಗರ ಪೋಲೀಸ್ ಠಾಣೆ ಮುಂದೆ ಅಧಿಕಾರಿ ಹಾಗೂ ಸಿಬ್ಬಂದಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಪಿಎಸ್‌ಐ ಮಂಜುನಾಥ, ಅರ್ಜನ್ ಲಿಂಗಾರೆಡ್ಡಿ, ಪೋಲೀಸ್ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ವಿಜಯ, ಗಂಗಾಧರ್, ಸಂತೋಷ, ಕುಮಾರಸ್ವಾಮಿ, ವೆಂಕಟೇಶ, ಆರ್.ಕೆ. ತಿಪ್ಪೇಸ್ವಾಮಿ, ಶಿವಾನಂದ ಮಡಿವಾಳ, ಹರೀಶ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















