ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ಅಂಗವಿಲತೆಯನ್ನು ಮೆಟ್ಟಿನಿಂತು ಸಾಧ್ಯತೆಗಳನ್ನು ಹುಡುಕುವುದೇ ಮನುಷ್ಯನ ನೈಜ ಸಾಧನೆಯಾಗಿದ್ದು, ಇಂಥವರ ಬದುಕೇ ನಮಗೆಲ್ಲಾ ಸ್ಫೂರ್ತಿದಾಯಕವಾಗಿದೆ ಎಂದು ರಾಹುಲ್ ಗಾಂಧಿ Rahul Gandhi ಹೇಳಿದರು.
True Kannadiga spirit! pic.twitter.com/YUWU1sgK9J
— Rahul Gandhi (@RahulGandhi) October 11, 2022
ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಮದ ಹೊರವಲಯದಲ್ಲಿರುವ ಚೇತನ್ ಹೋಟೆಲ್ ಬಳಿ ಮಂಗಳವಾರ ಭಾರತ್ ಜೋಡೋ ಪಾದಯಾತ್ರೆಯ ವಿಶ್ರಾಂತಿ ಸಮಯದಲ್ಲಿ ವಿವಿಧ ಮಹಿಳಾ ಕಾರ್ಯಕರ್ತೆಯರೊಂದಿಗೆ ಸಂವಾದ ನಡೆಸುವ ಸಂದರ್ಭದಲ್ಲಿ ಹಾಜರಿದ್ದ ಲಕ್ಷ್ಮೀದೇವಿಯು ತನ್ನ ಕಾಲುಗಳಲ್ಲಿ ಬರೆಯುವ ಕೌಶಲವನ್ನು ಕಂಡು ರಾಹುಲ್ ಗಾಂಧಿಯವರು ನಿಬ್ಬೆರಗಾಗುವುದರ ಜತೆಗೆ ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡಿದ್ದು ವಿಶೇಷವಾಗಿತ್ತು.
ಹುಟ್ಟಿನಿಂದಲೇ ಭುಜದವರೆಗೂ ಎರಡೂ ಕೈಗಳಿಲ್ಲದಿದ್ದರೂ ತನ್ನ ಕಾಲುಗಳನ್ನೇ ಕೈಗಳಂತೆ ಬಳಸಿಕೊಳ್ಳುತ್ತಾ ಬರವಣಿಗೆ ಮಾಡುವ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಂಡುಮುಣುಗು ಗ್ರಾಮದ ಲಕ್ಷ್ಮೀದೇವಿಯ ಜೀವನ ಉತ್ಸಾಹವನ್ನು ಕಂಡು ಭಾರತ್ ಜೋಡೋ ಪಾದಯಾತ್ರೆ ನಡೆಸುವ ಎಐಸಿಸಿ ನಾಯಕ ರಾಹುಲ್ ಗಾಂಧಿಯವರು ಫಿದಾ ಆಗಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚಳ್ಳಕೆರೆ ಶಾಸಕ ರಘುಮೂರ್ತಿ, ಮಾಜಿ ಸಚಿವ ಎಚ್.ಆಂಜನೇಯ ಸೇರಿ ಅನೇಕ ಮುಖಂಡರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post