ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ವಿದ್ಯಾರ್ಥಿಗಳು ಮತ್ತು ಪದವೀಧರರು ತಮ್ಮ ಕಲಿಕೆಯ ಜೊತೆಯಲ್ಲಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.
ತಾಲೂಕಿನ ತಿಪ್ಪಯ್ಯನ ಕೋಟೆ ಗ್ರಾಮದಲ್ಲಿ ಗಿಡ ನೆಡುವ ಮೂಲಕ ಮಾರುತಿ ಕ್ರಿಕೆಟರ್ಸ್ ಕ್ರೀಡಾಕೂಟದ ಪಂದ್ಯಾವಳಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Also read: ಜೋಗದಿಂದ ಸಿಗಂದೂರಿಗೆ ಸಂಪರ್ಕಿಸುವ ಮುಪ್ಪಾನೆ-ಕಡುವು ಬೋಟ್ ಸಂಚಾರ ಯಶಸ್ವಿ!
ಅಲ್ಪಸ್ವಲ್ಪ ಇರುವ ಕೊಳವೆ ಬಾವಿ ನೀರನ್ನು ಕೂಡ ಬಳಸಬೇಕು. ಸಾರ್ವಜನಿಕ ಜೀವನದ ಮೌಲ್ಯಕ್ಕೆ ಬೇಕಾಗಿರುವಂತಹ ಯುವಕರು ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಇಡೀ ರಾಜ್ಯದಲ್ಲಿ ಅತ್ಯಂತ ಕಡಿಮೆ ಮಳೆ ಬೀಳುವ ಮತ್ತು ನೀರನ್ನು ಸದ್ಬಳಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಗೋಮಾಳ ಹಳ್ಳ, ಕೆರೆ-ಕಟ್ಟೆ, ರಸ್ತೆ ಮುಂತಾದ ಸಾರ್ವಜನಿಕ ಸ್ವತ್ತುಗಳನ್ನು ಸಂರಕ್ಷಿಸುವ ಹೊಣೆಗಾರಿಕೆಯೂ ಕೂಡ ಈ ಭಾಗದ ಯುವಕ ಹಾಗೂ ಚುನಾಯಿತ ಪ್ರತಿನಿಧಿಗಳಾಗಿರಬೇಕು. ಈ ಮೂಲಕ ಹೆಚ್ಚು ಸ್ವಾವಲಂಬಿಗಳಾಗಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
 
	    	



 Loading ...
 Loading ... 
							



 
                
Discussion about this post