ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ರೈತರ ಜಮೀನಿನಲ್ಲಿ ಶೇಂಗಾ ಬೆಳೆಯಲು ಎಡೆಕುಂಟೆ ಹೊಡೆಯುವ ಮೂಲಕ ತಹಶೀಲ್ದಾರ್ ಎನ್. ರಘುಮೂರ್ತಿ ರೈತರಿಗೆ ಭರವಸೆ ಮೂಡಿಸಿದರು.
ರೈತ ಮುಖಂಡ ಕೆ.ಪಿ. ಭೂತಯ್ಯ, ಸೋಮುಗುದ್ದು ರಂಗಸ್ವಾಮಿ ಹಾಗೂ ರೆಡ್ಡಿಹಳ್ಳಿ ವೀರಣ್ಣ, ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಮುಂಗಾರು ಭಿತ್ತನೆ, ಬೆಳೆ ಸಮೀಕ್ಷೆ ಮತ್ತು ಬೆಳೆ ವಿಮೆ ಪರಿಶೀಲನೆ ಮಾಡುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ತಾಲ್ಲೂಕು ತಳಕು ಹೋಬಳಿಯ ಕ್ಯಾಂತಗೊಂಡನಹಳ್ಳಿ, ಯಾದಲಗಟ್ಟೆ, ಕಾಲುವೆಹಳ್ಳಿ, ಹಾಲುಗೊಂಡನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರ ಜಮೀನಿಗೆ ತಹಶೀಲ್ದಾರ್ ಎನ್. ರಘುಮೂರ್ತಿ ಭೇಟಿ ನೀಡಿ ಬಾಡುತ್ತಿರುವ ಶೇಂಗಾ ಬೆಳೆ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲ್ಲೂಕು ಮುಂಗಾರು ಹಂಗಾಮಿನಲ್ಲಿ ಶೇಂಗಾ ಭಿತ್ತನೆ ಸಮಯ. ಆದರೆ ಮಳೆ ಕುಂಠಿತವಾದ ಕಾರಣದಿಂದಾಗಿ ಶೇ.೨೦ರಷ್ಟು ಭಿತ್ತನೆಯಾಗಿದೆ ಎಂದರು.
Also read: ಜು.29ರಂದು ಜೆಡಿಎಸ್ ಸಂಘಟನಾ ಸಭೆ: ರಮೇಶ್ ಪಾಟೀಲ್ ಸೋಲಪೂರ್
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post