ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ನರಹರಿ ನಗರದ ಹಾಲು ಉತ್ಪಾದಕರ ಸಂಘದ ವತಿಯಿಂದ ನಡೆದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ಬಿ.ವಿ. ಸಂಜೀವಮೂರ್ತಿ ಹಾಗು ಉಪಾಧ್ಯಕ್ಷರಾಗಿ ಓ.ತಿಪ್ಪೇಸ್ವಾಮಿ ಇವರನ್ನು ಸದಸ್ಯರು ಸೇರಿ ಅವಿರೊಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಎಸ್. ಸಂಜಯ್ ರಾಮ್ ತಿಳಿಸಿದ್ದಾರೆ.
ಬಿ.ಸಿ. ಸಂಜೀವಮೂರ್ತಿ ಮಾತನಾಡಿ, ಪ್ರಾರಂಭದಲ್ಲಿ ನರಹರಿ ನಗರದಲ್ಲಿ ಹಾಲು ಉತ್ಪಾದನೆ ಕೇಂದ್ರವಿರಲಿಲ್ಲ ಇಲ್ಲಿ ಉತ್ಪಾದಿಸಿದ ಹಾಲುನ್ನು ನಗರಂಗೆರೆ ಹಾಲಿನ ಕೇಂದ್ರಕ್ಕೆ ಹಾಕಬೇಕಿತ್ತು. ಮೂರರಿಂದ ನಾಲ್ಕು ಕಿ.ಮೀಟರ್ ಸಾಗಿ ಹಾಲು ಕೇಂದ್ರಕ್ಕೆ ಕಳುಹಿಸಬೇಕಿತ್ತು. ಹಾಲು ಕಳಿಸುವ ಮಾರ್ಗದಲ್ಲಿ ರೈಲ್ವೆ ಗೇಟ್ ಇರುವುದರಿಂದ ಹಾಲು ಕಳುಹಿಸುವ ಸಮಯಕ್ಕೆ ಸರಿಯಾಗಿ ರೈಲು ಬರುವ ಕಾರಣ ಗೇಟ್ ಬಂದ್ ಮಾಡಲಾಗುತ್ತಿತ್ತು. ಇದರಿಂದ ಹಾಲು ಮಾರಾಟಕ್ಕೆ ತೊಂದರೆಯಾಗುತ್ತಿತ್ತು ಇದನ್ನ ಮನಗಂಡು ಇಲ್ಲಿಯೇ ಉತ್ಪಾದಕರ ಸಂಘವನ್ನು ಸ್ಥಾಪಿಸಲಾಯಿತು ಎಂದು ವಿವರಿಸಿದರು.
ಆರಂಭದಲ್ಲಿಂ ನೂರು ಲೀಟರ್ ಹಾಲು ಉತ್ಪಾನೆಯಾಗುತ್ತಿತ್ತು. ಪ್ರಸ್ತುತ 1200 ಲೀಟರ್ ಉತ್ಪಾದನೆಯಾಗುತ್ತಿದ್ದು, ತಾಲೂಕಿನಲ್ಲೇ ಎರಡನೇ ಸ್ಥಾನಕ್ಕೆ ಕಾಲಿಟ್ಟಿದ್ದು, ಈ ಭಾಗದಲ್ಲಿ ಹೈನುಗಾರಿಕೆಯನ್ನು ನಂಬಿ ಹಲವು ಕುಟುಂಬಗಳು ಜೀವನ ಸಾಗಿಸುತ್ತಿದ್ದು, ಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಕುಟುಂಬಗಳಿಗೆ ಹೈನುಗಾರಿಕೆಯಲ್ಲಿ ಸಹಕಾರ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಚುನಾವಣಾಧಿಕಾರಿ ಎಸ್. ಸಂಜಯ್ ರಾಮ್ ಮಾತನಾಡಿ, ಹಾಲು ಉತ್ಪಾನೆಯಲ್ಲಿ ಉತ್ತಮವಾದ ಸಾಧನೆ ಮಾಡುತ್ತಿರುವ ನರಹರಿ ನಗರ ಹಾಲು ಉತ್ಪಾದಕರ ಸಂಘವು ಹಲವಾರು ಕುಟುಂಬಗಳಿಗೆ ಜೀವನೋಪಯೊಗಕ್ಕೆ ವರವಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಹೈನುಗಾರಿಕೆಯಲ್ಲಿ ಪಾಲ್ಗೋಂಡು, ಜೀವನದ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು, ಹಾಗೆ ಹಸು ಸಾಕಣೆಕೆಗೆ ಸಾಲ ಸೌಲಭ್ಯಗಳನ್ನು ಬಳಸಿಕೊಳ್ಳುವ ಅವಕಾಶವಿದೆ ಎಂದು ಮಾಹಿತಿ ನೀಡಿದರು.
ಸಂಘದ ನೂತನ ಸದಸ್ಯರಾದ ತುಕರಾಮ್‌ರೆಡ್ಡಿ, ಪುಲ್ಲಾರೆಡ್ಡಿ, ಬಿ.ಆರ್. ಪುಷ್ಪಾ, ಸಂಜೀವಮೂರ್ತಿ, ನಾಗರತ್ನಮ್ಮ, ಲಕ್ಷಣ್, ಎನ್. ಮಾರುತಿ, ಕಾರ್ತಿಕ, ಎಸ್. ಮೂರ್ತಿ ಹಾಗೂ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಜಯಣ್ಣ, ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post