ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ತಂಗಳು ಬಿರಿಯಾನಿ ಸೇವಿಸಿ 25 ಕಾರ್ಮಿಕರು ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕುಣಿಗಳ್ಳಿಯಲ್ಲಿ ನಡೆದಿದೆ.
ಮಗನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಂತೋಷ್ ಎಂಬವರು ಜು.18 ರಂದು ಚಿಕನ್ ಬಿರಿಯಾನಿ ಮಾಡಿಸಿ ಸ್ನೇಹಿತರು, ಹಿತೈಷಿಗಳಿಗೆ ಆತಿಥ್ಯ ನೀಡಿದ್ದರು. ಮರುದಿನ ಜಮೀನಿಗೆ ಕಬ್ಬು ಕಟಾವಿಗೆ ಬಂದಿದ್ದ ಕಾರ್ಮಿಕರಿಗೆ ತಂಗಳು ಬಿರಿಯಾನಿ ನೀಡಿದ್ದರು. ಅದನ್ನು ಸೇವಿಸಿದ ಕಾರ್ಮಿಕರಿಗೆ ವಾಂತಿ-ಬೇಧಿ ಕಾಣಿಸಿಕೊಂಡಿದೆ. ಕೂಡಲೇ ಕಾರ್ಮಿಕರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Also read: ಕೆಆರ್‌ಎಸ್ ಜಲಾಶಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಣೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















