ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಸ್ವಾರ್ಥ ರಹಿತ ತ್ಯಾಗ ಮತ್ತು ದೇಶಪ್ರೇಮದಿಂದ #BhagatSingh ಭಗತ್ ಸಿಂಗ್, ರಾಜಗುರು, ಸುಖದೇವ್ #Sukhdev ರವರು ಅಮರತ್ವವನ್ನು ಪಡೆದಿದ್ದಾರೆ. ದೇಶಕ್ಕಾಗಿ ತ್ಯಾಗ, ಬಲಿದಾನವನ್ನು ಮಾಡಿದ ಮೂವರು ಕೋಟಿ ಕೋಟಿ ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಬಡಿದಬ್ಬಿಸಿ ಇಂದಿಗೂ ಯುವಕರಲ್ಲಿ ಸ್ಪೂರ್ತಿ ಚೈತನ್ಯದ ಶಕ್ತಿಯಾಗಿದ್ದಾರೆ ಎಂದು ಸಂಸ್ಕೃತಿ ಚಿಂತಕ, ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್. ಋಗ್ವೇದಿ ತಿಳಿಸಿದರು.
ಋಗ್ವೇದಿ ಕುಟೀರದ ಜೈಹಿಂದ್ ಕಟ್ಟೆಯಲ್ಲಿ ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ಹಮ್ಮಿಕೊಂಡಿದ್ದ ಹುತಾತ್ಮರ ದಿನ, ವೀರ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Also Read: ಏ.11-26 | ಇಸ್ಕಾನ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ
ಭಗತ್ ಸಿಂಗ್ ರಾಜಗುರು ಯುವಶಕ್ತಿಯ ಪ್ರತೀಕವಾಗಿದ್ದು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ #FreedomMovement ನೌ ಜವಾನ್ ಭಾರತ ಸಭಾವನ್ನು ಸ್ಥಾಪಿಸಿ, ಬ್ರಿಟಿಷ್ ಅಧಿಕಾರಿ ಸ್ಯಾoಡರ್ಸ್’ನನ್ನು ಹತ್ಯೆ ಮಾಡುವ ಮೂಲಕ ಬ್ರಿಟಿಷರಲ್ಲಿ ಭಯ ಉಂಟು ಮಾಡಿದವರು. ಇಂಕ್ವಿಲಾಬ್ ಜಿಂದಾಬಾದ್, ಕ್ರಾಂತಿ ಚಿರಾಯುವಾಗಲಿ ಎಂಬ ಘೋಷಣೆಯನ್ನು ಜಗತ್ತಿಗೆ ನೀಡಿದ ಮಹಾನ್ ಧೈರ್ಯಶಾಲಿ ಹೋರಾಟಗಾರರು. ಕೇವಲ 23 ವರ್ಷದಲ್ಲಿ ತಮ್ಮ ಪ್ರಾಣವನ್ನು ರಾಷ್ಟ್ರಕ್ಕಾಗಿ ಮುಡಿಪಾಗಿಟ್ಟ ಭಗತ್ ಸಿಂಗ್, ರಾಜಗುರು ಸುಖದೇವ ರವರ ದೇಶಪ್ರೇಮ ಮಾದರಿಯಾದದ್ದು ಎಂದರು.
ರಾಜಕೀಯ ಕೈದಿಗಳಿಗೆ ಉತ್ತಮವಾದ ಹಕ್ಕು ಮತ್ತು ಸೌಲಭ್ಯ ನೀಡಲು ಜೈಲಿನಲ್ಲಿ ಉಪವಾಸ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಧೈರ್ಯ ತುಂಬಿದರು. ಭಾರತೀಯರ ಬೇಡಿಕೆಗಳನ್ನು ಗಮನ ಹರಿಸಲು ಸೆಂಟ್ರಲ್ ಅಸೆಂಬ್ಲಿ ಹಾಲ್ ಮೇಲೆ ಬಾಂಬ ದಾಳಿಯನ್ನು ಮಾಡುವ ಮೂಲಕ ಬ್ರಿಟಿಷರಿಗೆ ಎಚ್ಚರಿಕೆ ನೀಡಿದ ಮಹಾನ್ ವ್ಯಕ್ತಿಗಳು ಭಗತ್ ಸಿಂಗ್ ರಾಜಗುರು ಸುಖದೇವ್ ಎಂದು ಸ್ಮರಿಸಿ, ಯುವಕರು ಭಾರತಕ್ಕಾಗಿ ತಮ್ಮ ಸೇವೆಯನ್ನು ಸಲ್ಲಿಸಬೇಕು. ಸಮಾಜಮುಖಿಯಾಗಿ ಕಾರ್ಯವನ್ನು ಮಾಡಬೇಕು ಎಂದರು.
Also Read: ಸ್ವಾಭಿಮಾನದ ಬದುಕಿಗೆ ವಿಶ್ವಕರ್ಮ ಯೋಜನೆ ಶಕ್ತಿ ತುಂಬಿದೆ: ಸಂಸದ ರಾಘವೇಂದ್ರ
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪತ್ರಿಕಾ ಕಾರ್ಯದರ್ಶಿಗಳಾದ ಬಿ.ಕೆ. ಆರಾಧ್ಯ ಮಾತನಾಡಿ, ಭಗತ್ ಸಿಂಗ್ ರಾಜಗುರು ಸುಖದೇವ್ ದೇಶದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳಾಗಿ ರೂಪುಗೊಂಡು ಬ್ರಿಟಿಷರಿಗೆ ಸಿಂಹ ಸ್ವಪ್ನರಾಗಿ ಹೋರಾಟ ನಡೆಸಿದವರು. ಜೈ ಹಿಂದ್ ಪ್ರತಿಷ್ಠಾನ ಸಾವಿರಾರು ರಾಷ್ಟ್ರವೀರರ ಸ್ಮರಣೆಯ ಕಾರ್ಯಕ್ರಮವನ್ನು ಪ್ರತಿದಿನ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯಾಗಿದೆ. ಜನರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ದಿಕ್ಕಿನಲ್ಲಿ ಜೈ ಹಿಂದ್ ಕಟ್ಟೆ ಯಶಸ್ವಿಯಾಗಿದೆ. ಮೂರು ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಜೈಹಿಂದ್ ಕಟ್ಟೆಯಲ್ಲಿ ಸರಳವಾಗಿ ಆಚರಿಸುವ ಮೂಲಕ ಸದಾ ಕಾಲ ಕ್ರಿಯಾಶೀಲರಾಗಿರುವುದು, ದೇಶಭಕ್ತರಿಗೆ ನೀಡುವ ಗೌರವದ ಪ್ರತೀಕವಾಗಿದೆ ಎಂದರು.
ಭಗತ್ ಸಿಂಗ್, ರಾಜಗುರು ಸುಖದೇವ್ ಹಾಗೂ ನೂರಾರು ಕ್ರಾಂತಿಕಾರಿ ಆತ್ಮಗಳಿಗೆ ಶಾಂತಿ ಕೋರಲಾಯಿತು. ಮಣಿಕಂಠ, ಆನಂದ, ಗೋವಿಂದ ನಾಯಕ್ ಶ್ರಾವ್ಯ, ಪೂಜಾ, ಲೇಖನ, ಆಕಾಶ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















