ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಸಾಹಿತ್ಯದ ನವೋದಯ ಕವಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ದ.ರಾ ಬೇಂದ್ರೆ #Da Ra Bendre ರವರ ಜನ್ಮದಿನ ಹಾಗೂ ಗೀತ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವರಕವಿ ಬೇಂದ್ರೆಯವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿ ಉದ್ಘಾಟಿಸಿದ ಕನ್ನಡ ಚಳುವಳಿಯ ನಾಯಕರದ ಶಾ ಮುರಳಿ ಬೇಂದ್ರೆ ಕನ್ನಡದ ಹೆಮ್ಮೆಯ ಕವಿ. ಬೇಂದ್ರೆಯವರು ಕನ್ನಡ ಸಾಹಿತ್ಯ ಲೋಕದಲ್ಲಿ ಅತ್ಯಂತ ಪ್ರಭಾವ ಬೀರಿದ ಸಾಹಿತಿ ಎಂದು ತಿಳಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಮಾತನಾಡಿ, ದ. ರಾ. ಬೇಂದ್ರೆ ಅವರು ಸ್ವಾತಂತ್ರ ಚಳುವಳಿಯಲ್ಲಿ ಪ್ರೇರಣಾದಾಯಕವಾದ ಕವನಗಳನ್ನು ರಚಿಸಿ ರಾಷ್ಟ್ರಭಕ್ತಿಯ ಪ್ರತೀಕವಾಗಿ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಜೈಲು ಶಿಕ್ಷೆಗೆ ಒಳಗಾದ ರಾಷ್ಟ್ರಪ್ರೇಮಿ. ಬೇಂದ್ರೆಯವರ ನಾಕುತಂತಿ ಕೃತಿ ಎರಡನೆಯ ರಾಷ್ಟ್ರ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿದೆ . ಮಾನವ ತನ್ನ ಹೃದಯ ವೈಶಾಲ್ಯವನ್ನು ಬೆಳೆಸಿಕೊಳ್ಳುವ ಮಹತ್ವದ ಕೃತಿ. ಬೇಂದ್ರೆಯವರು ಕವಿಯಾಗಿ ನಾಟಕಕಾರ, ವಿಮರ್ಶೆ, ಪ್ರಕೃತಿ, ಭಾವಗೀತೆ ಕವಿಯಾಗಿ ಕನ್ನಡಿಗರಿಗೆ ಹೆಮ್ಮೆಯ ಕವನಗಳನ್ನು ನೀಡಿದ್ದಾರೆ ಎಂದರು.
ಬರಹಗಾರ ಎಸ್ ಲಕ್ಷ್ಮೀನರಸಿಂಹ ಮಾತನಾಡಿ ಬೇಂದ್ರೆಯವರ ಸಾಹಿತ್ಯ ಅರ್ಥ ಮಾಡಿಕೊಳ್ಳುವುದು ಕಷ್ಟ ಸಾಧ್ಯ. 10 ಬಾರಿ ಓದಿದರೆ ಹತ್ತು ಬಾರಿಯೂ ಮತ್ತೊಂದು ರೀತಿಯಲ್ಲಿ ಅರ್ಥೈಸುವ ವಿಶೇಷವಾದ ಸಾಹಿತ್ಯ ಬೇಂದ್ರೆಯವರ ಸಾಹಿತ್ಯ ಕಷ್ಟದಲ್ಲಿ ನೋವಿನಲ್ಲಿ, ಸುಖದಲ್ಲಿ ಬರದ ಕಾವ್ಯವಾಗಿದೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಬೇಂದ್ರೆಯವರ ಕಾರ್ಯಕ್ರಮವನ್ನು ರೂಪಿಸಿ ಗೀತ ಗಾಯನವನ್ನು ಏರ್ಪಡಿಸಿರುವುದು ಮೆಚ್ಚುಗೆಯಾದದ್ದು ಎಂದರು.
ಬ್ರೈಟ್ ಪಿಯು ಕಾಲೇಜ್ ವಿದ್ಯಾರ್ಥಿ ಹಾಗೂ ಯುವಗಾಯಕ , ಅಭಿಷೇಕ್ ಬೇಂದ್ರೆಯವರ ಗೀತ ಗಾಯನವನ್ನು ನಡೆಸಿಕೊಟ್ಟರು. ಸಾಹಿತ್ಯ ಪರಿಷತ್ತಿನ ಪರವಾಗಿ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಯವರು ಅಭಿಷೇಕ್ ರವರನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ಬಿ ಕೆ ಆರಾಧ್ಯ ,ಪದ್ಮ ಪುರುಷೋತ್ತಮ್, ಸರಸ್ವತಿ, ಗೀತಾ, ಮಹೇಶ್ ಗೌಡ, ಪಣ್ಯದ ಹುಂಡಿ ರಾಜು, ರಾಜಗೋಪಾಲ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















