ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಪ್ರತಿವರ್ಷದಂತೆ ಈ ವರ್ಷವೂ ಹರೀಶಿಯಲ್ಲಿ ಬನದೇವತೆ ಗಜಲಕ್ಷ್ಮೀ ಉತ್ಸವ ಸಂಭ್ರಮ ಸಡಗರ ದಿಂದ ಸಂಪನ್ನಗೊಂಡಿತು.
ಹರೀಶಿ ಗ್ರಾಮ ಚಂದ್ರಗುತ್ತಿ ಹೋಬಳಿಯ ಚಿಕ್ಕ ಗ್ರಾಮ ಇಲ್ಲಿನ 35 ವಿಪ್ರ ಕುಟುಂಬಗಳು ತಲತಲಾಂತರದಿಂದ ಗಜಲಕ್ಷ್ಮೀ ಬನದಲ್ಲಿ ಉತ್ಸವ ನಡೆಸುತ್ತಿದ್ದು, ಕಾರ್ತೀಕ ಮಾಸದ ಏಕಾದಶಿ ಯಿಂದ ತ್ರಯೋದಶಿಯವರೆಗೆ ಅಲ್ಲಿನ ಅಪರೂಪದ ಧನ್ವಂತರಿ ದೇವಸ್ಥಾನ ದಲ್ಲಿ ಪೂಜೆ ಹವನ ನಡೆದು ಅಲ್ಲಿಂದ ಉತ್ಸವ ಮೂರ್ತಿ ಯನ್ನು ಪಲ್ಲಕ್ಕಿಯ ಮೂಲಕ ವನಕ್ಕೆ ತರಲಾಗುತ್ತದೆ. ವನದಲ್ಲಿ ಸಾವಿರ ವರ್ಷಕ್ಕೂ ಪ್ರಾಚೀನವಾದ ಗಜಲಕ್ಷ್ಮೀ ವಿಗ್ರಹಕ್ಕೆ ಅಲಂಕರಿಸಿ ಪೂಜಿಸುತ್ತಾರೆ. ಸಾರ್ವಜನಿಕ ಹಣ್ಣುಕಾಯಿ ನೈವೇದ್ಯ ದ ಬಳಿಕ ಪ್ರಸಾದ ವಿನಿಯೋಗ, ವನಬೋಜನ ನಡೆಯುತ್ತದೆ.
ಅರ್ಚಕ ಶ್ರೀಧರ ಭಟ್, ಸುಬ್ರಾಯಭಟ್, ವಿನಾಯಕ ಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು.
ಗ್ರಾಮದ ವಿಪ್ರಸಮೂಹದವರು, ಗ್ರಾಮ ಪ್ರಮುಖರು ಇದ್ದರು.
Also read: ತಾಯಿಯ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದ ಮಗ ಹೃದಯಾಘಾತದಿಂದ ಸಾವು!
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post