ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ನಮ್ಮ ಗ್ರಾಮದಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡೆ ಯಶಸ್ವಿಯಾದ ದಾರಿಯನ್ನು ಕೂಡಿಕೊಂಡು ಬಂದಿದೆ ಎಂದು ಗ್ರಾಪಂ ಅಧ್ಯಕ್ಷ ಎಂ.ಪಿ ರತ್ನಾಕರ್ ಹೇಳಿದರು.
ಚಂದ್ರಗುತ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಫ್ರೆಂಡ್ಸ್ ಸರ್ಕಲ್ ಚಂದ್ರಗುತ್ತಿ ಇವರ ವತಿಯಿಂದ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಿಂದ ಊರಿನ ಶ್ರೇಯಸ್ಸನ್ನು ಎತ್ತಿ ಹಿಡಿಯುವಂತಹ ಪ್ರಯತ್ನವು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಗ್ರಾಮೀಣ ಭಾಗಗಳಲ್ಲಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಪ್ರತಿಭೆಗಳಿಗೆ ಉತ್ತಮ ಅವಕಾಶ ನೀಡುವ ಕೆಲಸವಾಗಬೇಕು. ಕ್ರೀಡೆ ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದೆ, ಇದು ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮ ಅಭಿವೃದ್ಧಿಯ ಮೂಲವಾಗಿದೆ. ಇದು ನಮ್ಮ ದೇಹದ ರಕ್ತ ಪರಿಚಲನೆಗೆ ಸಹಕಾರಿಯಾಗಿದೆ, ಮತ್ತೊಂದೆಡೆ ಇದು ನಮ್ಮ ಮೆದುಳಿನ ಬೆಳವಣಿಗೆಯಲ್ಲಿ ಪ್ರಯೋಜನಕಾರಿಯಾಗಿದೆ. ಕ್ರೀಡೆಗಳನ್ನು ವ್ಯಾಯಾಮದ ಅತ್ಯುತ್ತಮ ಸಾಧನವೆಂದು ಪರಿಗಣಿಸಲಾಗುತ್ತದೆ ಎಂದರು.
ವಾಲಿಬಾಲ್ ಕ್ರೀಡಾಂಗಣದ ಉದ್ಘಾಟನೆಯನ್ನು ಅಜೀಜ್ ಅಹ್ಮದ್ ಉದ್ಘಾಟಿಸಿದರು.
ಚಂದ್ರಗುತ್ತಿಯಲ್ಲಿ ವಾಲಿಬಾಲ್ ಕ್ರೀಡೆಗೆ ದಾನಿಗಳು ಹೆಚ್ಚಿನ ಸಹಕಾರ ನೀಡಿದ್ದಾರೆ. ಕ್ರೀಡಾಪಟುಗಳಲ್ಲಿ ಅಡಗಿರುವಂತಹ ಪ್ರತಿಭೆಗಳನ್ನು ಗುರುತಿಸಲು ವಾಲಿಬಾಲ್ ಅಂತಹ ಕ್ರೀಡೆಗಳು ಸಹಕಾರಿಯಾಗಿವೆ.
ಸಂಜಯ್ ಚಂದ್ರಗುತ್ತಿ, ಫ್ರೆಂಡ್ಸ್ ಸರ್ಕಲ್ ಸಂಘಟಕರು
ವಾಲಿಬಾಲ್ ಪಂದ್ಯಾವಳಿಯಲ್ಲಿ 20ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಪ್ರಥಮ ಬಹುಮಾನ ಶ್ರೀಧರ್ ಮಾಲಿಕತ್ವದ ಶಿವಮೊಗ್ಗ ಸ್ಪೈಕರ್ಸ್ ತಂಡ, ದ್ವಿತೀಯ ಸ್ಥಾನವನ್ನು ಶಿಕಾರಿಪುರ, ತೃತೀಯ ಸ್ಥಾನವನ್ನು ಇಮ್ರಾನ್ ಮಾಲಿಕತ್ವದ ಕುಮಟಾ ತಂಡ, ಚತುರ್ಥ ಸ್ಥಾನವನ್ನು ಇರ್ಫಾನ್ ಮತ್ತು ನೌಶಾದ್ ಮಾಲೀಕತ್ವದ ಉಪ್ಪಿನ ಅಂಗಡಿ ತಂಡದವರು ಗಳಿಸಿದರು.
Also read: ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆ ಸೆರೆ
ಗ್ರಾ.ಪಂ ಸದಸ್ಯ ರೇಣುಕಾಪ್ರಸಾದ್, ಗ್ರಾ.ಪಂ ನೌಕರರಾದ ಸಂತೋಷ್, ಮಂಜು, ಪ್ರಮುಖರಾದ ವಾಸುದೇವ್ ಶಿಕ್ಷಕರು, ಮಮ್ಮದ್ ಖಾನ್ ಸಾಬ್, ರಜಾಕ್, ದೇವಿಂದ್ರಪ್ಪ, ನಾರಾಯಣಪ್ಪ ಗಾರ್ಡ್, ದಿನೇಶ್ ಶಿವಪುರ, ಪ್ರವೀಣ್ ಮಿರ್ಜಿ, ಪ್ರಶಾಂತ್ ಮೆಡಿಕಲ್, ಕುಬೇರ್ ಶೇಟ್, ಪ್ರಶಾಂತ್ ಗುಡಿಗಾರ್, ರಾಘವೇಂದ್ರ ಜನಪ್ರಿಯ, ಆನಂದ್, ಫ್ರೆಂಡ್ಸ್ ಸರ್ಕಲ್ ಸಂಘಟಕರಾದ ಗುರುಪ್ರಸಾದ್, ಸಂಜಯ್, ನದೀಮ್, ಸುಹೇಲ್, ಶುಕ್ರಿಯ, ಅಭಿ, ಗೌತಮ್, ಕುಮಾರ್, ಮಯೂರ್, ಅಮಿತ್ ಶೇಟ್, ಸೇರಿದಂತೆ ಮತ್ತಿತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post