ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಸ್ನೇಹ, ಸೌಹಾರ್ದತೆಗೆ ಸಾಕ್ಷಿಯಾಗುವ ಗ್ರಾಮೀಣ ಕ್ರೀಡೆಗಳಲ್ಲಿ ಜಾತಿ, ಮತ, ಧರ್ಮ ಹಾಗೂ ರಾಜಕೀಯ ಬೆರೆಸದೇ ಕ್ರೀಡೆಗಳ ಬೆಳವಣಿಗೆಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಸಮಾಜ ಸೇವಕ ಹಾಗೂ ಜೆಡಿಎಸ್ ಮುಖಂಡ ಪ್ರಸನ್ನ ಕುಮಾರ್ ಎಂ. ಸಮನವಳ್ಳಿ ಹೇಳಿದರು.
ಚಂದ್ರಗುತ್ತಿ ಸಮೀಪದ ನೆಲ್ಲೂರು ಗ್ರಾಮದಲ್ಲಿ ಮಕರ ಸಂಕ್ರಮಣ ಹಬ್ಬದ ಪ್ರಯುಕ್ತ ಶ್ರೀ ಮಾರಿಕಾಂಬ ಗೆಳೆಯರ ಬಳಗದ ವತಿಯಿಂದ ಏರ್ಪಡಿಸಿದ ಅಂತರಾಜ್ಯ ಮಟ್ಟದ ಆಹ್ವಾನಿತ ಲೀಗ್ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು,
ದೇಶಿಯ ಕ್ರೀಡೆಯಾದ ಕಬಡ್ಡಿಗೆ ಸಾಕಷ್ಟು ಮಹತ್ವವಿದೆ. ಇದೀಗ ಕಬಡ್ಡಿ ದೇಶದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ. ಇಂತಹ ಕ್ರೀಡಾಕೂಟಗಳು ಪ್ರತಿ ಹಳ್ಳಿಗಳಲ್ಲೂ ನೆಡೆಯಬೇಕು. ಇಂತಹ ಕ್ರೀಡಾಕೂಟಗಳಿಗೆ ನನ್ನ ಕೈಲಾದ ಸಹಕಾರ ನೀಡುತ್ತೇನೆ. ಗ್ರಾಮೀಣ ಯುವಕರ ಉತ್ತಮ ಆರೋಗ್ಯಕ್ಕಾಗಿ ಕಬಡ್ಡಿ ಮಾತ್ರವಲ್ಲ, ಕ್ರಿಕೆಟ್, ವಾಲಿಬಾಲ್ ಸೇರಿದಂತೆ ಇತರೆ ದೇಶೀಯ ಕ್ರೀಡೆಗಳನ್ನು ಆಯೋಜಿಸುವಂತೆ ತಿಳಿಸಿದರು.
ಶಿಕ್ಷಣಕ್ಕೆ ಮೊದಲು ಆದ್ಯತೆ ನೀಡಬೇಕು ಇವತ್ತಿನ ಸಮಾಜದಲ್ಲಿ ಸದೃಢವಾಗಿ ನಿಲ್ಲುವುದಕ್ಕೆ ಶಿಕ್ಷಣದ ಮಹತ್ವ ಎಲ್ಲರಿಗೂ ತಿಳಿಯಬೇಕು, ಕ್ರೀಡೆಯ ಮಹತ್ವ ಮುಂದಿನ ಮಕ್ಕಳಿಗೆ ಭವಿಷ್ಯದ ಮಾರ್ಗದರ್ಶನವಾಗಬೇಕು, ಶಿಕ್ಷಣವನ್ನು ಕ್ರೀಡೆಯ ಮುಖಾಂತರವಾಗಿ ಬೇರೆ ಯಾವುದೇ ಒಂದು ವೇದಿಕೆ ಸೃಷ್ಟಿ ಮಾಡುವಂತಹ ಶೈಕ್ಷಣಿಕ ಕಾರ್ಯಕ್ರಮಗಳು ಆಗಬೇಕು,
ರಾಘವೇಂದ್ರ ನಾಯ್ಕ್ ಸುಂಟ್ರಳ್ಳಿ
ಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ತಬಲಿ ಬಂಗಾರಪ್ಪ ಮಾತನಾಡಿ, ಗ್ರಾಮೀಣ ಕ್ರೀಡೆಯಾದಂತಹ ಕಬ್ಬಡ್ಡಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ. ಕಬ್ಬಡ್ಡಿ ಕ್ರೀಡೆಯು ನೂರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರ ಕಾಲದಿಂದಲೂ ಗ್ರಾಮೀಣ ಹಳ್ಳಿ ಮಕ್ಕಳ ನೆಚ್ಚಿನ ಆಟವಾಗಿದ್ದ ಕಬಡ್ಡಿ ಆಟಕ್ಕೆ ವಿಶಿಷ್ಟವಾದ ಇತಿಹಾಸವಿದೆ ಎಂದರು.
Also read: ಸಂಕ್ರಾತಿ ಪ್ರಯುಕ್ತ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಂಪನ್ನ
ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ನಾರಾಯಣಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪಂದ್ಯಾವಳಿಯಲ್ಲಿ ರಾಘವೇದ್ರ ನಾಯ್ಕ್ ಕೋಡಂಬಿ ಹಾಗೂ ಅಂಕುಶ್ ಎನ್.ಕೆ ವಾರಿಯರ್ಸ್ ಇವರ ಮಾಲಿಕತ್ವದ ಹರಿಯಾಣ ತಂಡ ಪ್ರಥಮ, ರಾಕೇಶ್ ಕೆ.ಟಿ ಹಾಗೂ ಜಿತೇಂದ್ರ ನಾಯ್ಕ್ ಇವರ ಮಾಲಿಕತ್ವದ ತಬಲಿ ಟೈಟನ್ಸ್ ತಂಡ ದ್ವಿತೀಯ, ಹಾಗೂ ಆರ್.ಜೆ.ಬುಲ್ಸ್ ತಂಡ ತೃತೀಯ, ದರ್ಶನ್ ಬಡಗಿ, ವಿನಾಯಕ ಅರ್.ಡಿ, ಅನಿಲ್ ಇವರ ಮಾಲೀಕತ್ವದ ಎಸ್.ಎಂ.ಟಿ ವಾರಿಯರ್ಸ್ ತಂಡದವರು ಚತುರ್ಥ ಸ್ಥಾನ ಪಡೆದರು, ಮತ್ತು ಉತ್ತಮ ದಾಳಿಗಾರ ಹಾಗೂ ಹಿಡಿತಗಾರರನ್ನು ಗೆಳೆಯರ ಬಳಗದವರು ಗುರುತಿಸಿ ಬಹುಮಾನ ನೀಡಿ ಸನ್ಮಾನಿಸಿದರು.
ವೀಕ್ಷಕ ವಿವರಣೆಗಾರರಾಗಿ ಗುರುರಾಜ್ ನಾಯ್ಕ್ ಕಾರ್ಯ ನಿರ್ವಹಿಸಿದರು.
ತಾಪಂ ಮಾಜಿ ಅಧ್ಯಕ್ಷ ಹೆಚ್ ಗಣಪತಿ ಹುಲ್ತಿಕೊಪ್ಪ, ಆರ್ಯ ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಆರ್. ಶ್ರೀಧರ್ ಹುಲ್ತಿಕೊಪ್ಪ, ಗ್ರಾಪಂ ಸದಸ್ಯ ಮಂಜು ಮಾವಿನಬಳ್ಳಿಕೊಪ್ಪ, ರಾಘವೇಂದ್ರ ನಾಯ್ಕ್ ಸುಂಟ್ರಳ್ಳಿ, ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜು ಮಾವಿನಬಳ್ಳಿಕೊಪ್ಪ, ತಾಪಂ ಮಾಜಿ ಸದಸ್ಯರಾದ ಸುನಿಲ್ ಗೌಡ, ಎನ್.ಜಿ. ನಾಗರಾಜ್, ಬೆನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ಮಾರ್ಯಪ್ಪ, ಕಾಂಗ್ರೆಸ್ ಮುಖಂಡ ರವಿ ನಾಯ್ಕ, ಮಂಜು ಹರೀಶಿ, ಮಾರಿಕಾಂಬ ಗೆಳೆಯರ ಬಳಗದ ಅಧ್ಯಕ್ಷ ಸುಧಾಕರ್ ನಾಯ್ಕ್ ಸೇರಿದಂತೆ ಸಮಿತಿಯ ಎಲ್ಲಾ ಪದಾಧಿಕಾರಿಗಳು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು,
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post