ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ಧನುರ್ಮಾಸದ ಪ್ರಯುಕ್ತವಾಗಿ ಒಂದು ತಿಂಗಳ ಕಾಲ ಪ್ರತಿನಿತ್ಯ ಬೆಳಗಿನ ವೇಳೆ ಪೂಜೆ ಪುನಸ್ಕಾರಗಳು ನಡೆದು ಬಂದಿದ್ದು ಧನುರ್ಮಾಸದ ಮಕರ ಸಂಕ್ರಮಣದಂದು ಶ್ರೀ ರೇಣುಕಾಂಬೆಗೆ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿ ಸಂಪನ್ನಗೊಂಡಿತು.
ಬೆಳಗಿನ ವೇಳೆ ಭಕ್ತರು ಒಂದು ತಿಂಗಳ ಕಾಲ ಪ್ರತಿನಿತ್ಯ ಶ್ರೀ ರೇಣುಕಾಂಬ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ಆರಾಧನೆ ಮತ್ತು ವಿಶೇಷ ಪೂಜೆಯಲ್ಲಿ, ಪಾಲ್ಗೊಳ್ಳುತ್ತಿದ್ದರು,
ಧನುರ್ಮಾಸದ ಕೊನೆಯ ದಿನವಾದ ಮಕರ ಸಂಕ್ರಮಣದಂದು ಶ್ರೀ ರೇಣುಕಾಂಬ ದೇವಸ್ಥಾನದ ಆವರಣದಲ್ಲಿರುವ ಪರಿವಾರ ದೇವರುಗಳಾದ ಕಾಲಭೈರವ, ನಾಗದೇವತೆ, ಮಾತಂಗಿ, ಪರಶುರಾಮ, ತ್ರಿಶೂಲದ ಭೈರಪ್ಪ, ದೇವರುಗಳಿಗೆ ವಿಶೇಷ ಪೂಜೆ ನೆರವೇರಿದವು,
ಶ್ರೀ ರೇಣುಕಾಂಬ ದೇಗುಲದಲ್ಲಿ ಒಂದು ತಿಂಗಳ ಕಾಲ ಧನುರ್ಮಾಸದ ಅಂಗವಾಗಿ ಪ್ರತಿನಿತ್ಯ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆದು ಬಂದಿದ್ದು. ಮಕರ ಸಂಕ್ರಮಣದಂದು ಧನುರ್ಮಾಸದ ಪೂಜೆ ಸಂಪನ್ನಗೊಂಡಿದೆ. ಮಕರ ಸಂಕ್ರಮಣವು ನಾಡಿನಾದ್ಯಂತ ಪ್ರತಿಯೊಬ್ಬರ ಬಾಳಿನಲ್ಲೂ ಸಮೃದ್ಧಿಯ ಸಂಕೇತ ತರಲಿ
ವಿ.ಎಲ್ ಶಿವಪ್ರಸಾದ್, ಶ್ರೀ ರೇಣುಕಾಂಬ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ
ದೇವಸ್ಥಾನದ ಪ್ರಧಾನ ಅರ್ಚಕರಾದ ಅರವಿಂದ್ ಭಟ್ ಅವರ ನೇತೃತ್ವದಲ್ಲಿ ಧನುರ್ಮಾಸದ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು.
ಚಂದ್ರಗುತ್ತಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅನೇಕ ಭಕ್ತರು ಮಕರ ಸಂಕ್ರಮಣದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಬಂದಂತಹ ಎಲ್ಲ ಭಕ್ತರಿಗೂ ಸಂಕ್ರಾಂತಿ ಕಾಳುಗಳು ಹಾಗೂ ಹಣ್ಣಿನ ಪ್ರಸಾದ ವಿತರಿಸಲಾಯಿತು.
Also read: ಭೀಕರ ರಸ್ತೆ ಅಪಘಾತ | ಭದ್ರಾವತಿಯ ಯುವತಿ ದಾರುಣ ಸಾವು
ದೇವಸ್ಥಾನದ ಆವರಣದಲ್ಲಿ ಭಕ್ತರು ಸಂಕ್ರಾಂತಿ ಕಾಳುಗಳನ್ನು ಎಲ್ಲರಿಗೂ ಹಂಚುತ್ತ ಸಂಭ್ರಮಿಸಿದರು. ಸಂಜೆ ವೇಳೆ ಸಣ್ಣ ಪುಟ್ಟ ಪುಟಾಣಿ ಮಕ್ಕಳು ಸಾಂಪ್ರದಾಯಿಕ ಉಡುಪುಗಳು ಧರಿಸಿ ಹಿರಿಯರಿಗೆ ಸಂಕ್ರಾಂತಿ ಕಾಳುಗಳನ್ನು ಕೊಡುವುದರ ಮೂಲಕ ಹಿರಿಯರ ಆಶೀರ್ವಾದ ಪಡೆದು ಸಂಭ್ರಮಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















