ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಶಿಕ್ಷಕರ ಮಾರ್ಗದರ್ಶನ ಹಾಗೂ ಪ್ರೇರೇಪಣೆಯಿಂದ ಸ್ಪೂರ್ತಿ ಸ್ನೇಹಿತರ ಬಳಗದವರಿಂದ ಇಲ್ಲಿನ ಪುರಾಣ ಪ್ರಸಿದ್ಧ ಶ್ರೀ ರೇಣುಕಾಂಬ ದೇವಸ್ಥಾನ ಆವರಣದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಿದ್ದೇವೆ ಎಂದು ಸ್ಪೂರ್ತಿ ಬಳಗದ ಅಧ್ಯಕ್ಷ ವೀಣಾ ಶಶಿಧರ ಹೆಗಡೆ ತಿಳಿಸಿದರು.

Also read: ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ 150 ಸ್ಥಾನ ಖಚಿತ: ಶಾಸಕ ಈಶ್ವರಪ್ಪ ವಿಶ್ವಾಸ
ನಿವೃತ್ತಿ ಶಿಕ್ಷಕಿ ವಿನೋದ ಅರ್ಚಕ್ ಮಾತನಾಡಿ ನಮ್ಮ ವಿದ್ಯಾರ್ಥಿಗಳು ನಡೆಸುತ್ತಿರುವ ಈ ಒಂದು ಸ್ವಚ್ಛತಾ ಕಾರ್ಯದಿಂದಾಗಿ ನಿವೃತ್ತಿ ದಿನಗಳಲ್ಲಿ ಸಹ ನಮ್ಮ ವಿದ್ಯಾರ್ಥಿಗಳೊಡನೆ ಸೇರಿ ಸ್ವಚ್ಛತಾ ಕಾರ್ಯ ನಡೆಸುವ ಅವಕಾಶ ಕಲ್ಪಿಸಿಕೊಟ್ಟಂತಹ ಸ್ಪೂರ್ತಿ ಸ್ನೇಹಿತರ ಬಳಗದವರು ಸಮಾಜದಲ್ಲಿ ಇನ್ನೂ ಹತ್ತು ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಹಾರೈಸಿದರು.
ದಿನೇಶ್ ಅಂಚೆ ಮಾತನಾಡಿ ನಾವು ಮಾಡುವಂತ ಕೆಲಸ ಎಲ್ಲರಿಗೂ ಮಾರ್ಗದರ್ಶನವಾಗಬೇಕು, ಇದರಿಂದ ದೇವಸ್ಥಾನದ ಬೀದಿಗಳು ಹಾಗೂ ಗ್ರಾಮವನ್ನು ಸ್ವಚ್ಛವಾಗಿ ಇಡಬೇಕು ಎಂಬುವುದು ನಮ್ಮ ಉದ್ದೇಶವಾಗಿದೆ ಎಂದರು.
ಧಾರ್ಮಿಕ ಶಕ್ತಿ ಕೇಂದ್ರವಾದ ಶ್ರೀ ರೇಣುಕಾಂಬ ದೇಗುಲದ ಆವರಣದಲ್ಲಿ ಇರುವಂತಹ ಕಸ, ಕಡ್ಡಿ, ತ್ಯಾಜ್ಯಗಳನ್ನು ಸ್ವಚ್ಛಗೊಳಿಸುವ ಮೂಲಕ ಸ್ಪೂರ್ತಿ ಬಳಗದವರು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.ಪ್ರಸನ್ನ ಶೇಟ್, ದೇವಸ್ಥಾನದ ಸಮಿತಿ ಅಧ್ಯಕ್ಷರು ಚಂದ್ರಗುತ್ತಿ
ಸ್ವಚ್ಛತಾ ಕಾರ್ಯದಲ್ಲಿ ದೇವಸ್ಥಾನದ ಸಮಿತಿ ಅಧ್ಯಕ್ಷ ಪ್ರಸನ್ನ ಶೇಟ್, ಶಿವಕುಮಾರ್, ದಿನೇಶ್ ಅಂಚೆ, ಶ್ರೀದೇವಿ, ಅನ್ಸರ್, ಕಣ್ಣಪ್ಪ, ಶರತ್ ನಾಯಕ್, ಪ್ರಕಾಶ್, ಶ್ರೀಧರ್, ವಿಶ್ವನಾಥ್, ಪ್ರಶಾಂತ್ ನಾಯ್ಕ, ದೇವರಾಜ್, ಸೇರಿದಂತೆ ಸ್ಪೂರ್ತಿ ಬಳಗದ ಎಲ್ಲಾ ಸ್ನೇಹಿತರು ದೇವಸ್ಥಾನದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.ವರದಿ: ಮಧುರಾಮ್, ಸೊರಬ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















