Read - 2 minutes
ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಜಾಮಿಯಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಶನಿವಾರ ಶ್ರದ್ಧಾಭಕ್ತಿ ಹಾಗೂ ವಿಶೇಷ ಪ್ರಾರ್ಥನೆಗಳೊಂದಿಗೆ ರಂಜಾನ್ Ramzan ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಚಂದ್ರಗುತ್ತಿಯ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಮೆರವಣಿಗೆ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮುಸ್ಲಿಂ ಬಾಂಧವರು ಏಕಕಾಲಕ್ಕೆ ಎಲ್ಲರು ಸೇರಿಕೊಂಡು ಸಾಮೂಹಿಕ ಪ್ರಾರ್ಥನೆ ಮಾಡಿದರು. ಚಿಕ್ಕ ಮಕ್ಕಳು ಕೂಡ ಭಾಗವಹಿಸಿರುವುದು ವಿಶೇಷವಾಗಿ ಕಂಡು ಬಂದಿತು.
ಧರ್ಮ ಗುರುಗಳು ಹಬ್ಬದ ಸಂದೇಶ ಸಾರಿ ದಾನ-ಧರ್ಮದ ಮಹತ್ವದ ಕುರಿತು ಬೋಧನೆ ಮಾಡಿದರು. ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ಬಾಳುವಂತೆ ಕರೆ ನೀಡಿದರು.
ಗ್ರಾಮದಲ್ಲಿ ಅನ್ಯೋನ್ಯತೆ ಮತ್ತು ಸಹೋದರರಂತೆ ಇರುವ ಮುಸ್ಲಿಂ ಭಾಂದವರು ಒಂದು ತಿಂಗಳ ಕಾಲ ಉಪವಾಸವನ್ನು ಕೈಗೊಂಡು ರಂಜಾನ್ ಹಬ್ಬವನ್ನು ಆಚರಿಸುವುದು ಮಹತ್ವ ಪಡೆದಿದೆ. ದೇವರು ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಶಾಂತಿ, ನೆಮ್ಮದಿ, ಸಂತೋಷ ಮತ್ತು ಸಮೃದ್ಧಿಯ ಆಶೀರ್ವಾದ ನೀಡಿ ಹರಸಲಿ. ಪವಿತ್ರ ರಂಜಾನ್ ಮಾಸ ನಿಮ್ಮ ಮನ ಮನೆಗಳಲ್ಲಿ ಖುಷಿ ನೆಲೆಗೊಳ್ಳುವಂತೆ ಮಾಡಲಿ. ಸಮಸ್ತ ಮುಸ್ಲಿಂ ಭಾಂದವರಿಗೆ ರಂಜಾನ್ ಹಬ್ಬದ ಕುರಿತು ಶುಭ ಹಾರೈಸಿದರು.– ರೇಣುಕಾ ಪ್ರಸಾದ್ ಗ್ರಾ.ಪಂ ಸದಸ್ಯ ಚಂದ್ರಗುತ್ತಿ
ರಂಜಾನ್ ಮಾಸವು ಮುಸ್ಲಿಮರಿಗೆ ಅತ್ಯಂತ ಪವಿತ್ರವಾದ ಆಚರಣೆಯ ಮಾಸವಾಗಿದೆ. ದೇಹ ಮತ್ತು ಮನಸ್ಸಿನ ಶುದ್ಧಿಗಾಗಿ ಇಡೀ ತಿಂಗಳು ಮುಸ್ಲಿಮರು ಉಪವಾಸ ಕೈಗೊಳ್ಳುತ್ತಾರೆ. ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನವೇ ಆಹಾರ ಸೇವಿಸಿ ನಂತರ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಕಠಿಣ ಉಪವಾಸ ಕೈಗೊಳ್ಳುತ್ತಾರೆ. ಮಕ್ಕಳು, ವೃದ್ಧರು, ಗರ್ಭಿಣಿಯರು ಸೇರಿದಂತೆ ಕೆಲವರಿಗಷ್ಟೇ ಈ ಉಪವಾಸದಿಂದ ವಿನಾಯಿತಿ ಇದೆ.
ಬಿಳಿ ಬಣ್ಣದ ಜುಬ್ಬಾ, ಪೈಜಾಮ್, ಕುರ್ತಾ ಧರಿಸಿದ್ದ ಮುಸ್ಲಿಮರು ಎಲ್ಲೆಡೆಯಲ್ಲೂ ಶಾಂತಿ, ಸೌಹಾರ್ದದಿಂದ ಪರಸ್ಪರ ಆಲಂಗಿಸಿ ’ಈದ್ ಮುಬಾರಕ್‘ ಹೇಳಿಕೊಂಡು ಪರಸ್ಪರ ಶುಭಾಶಯ ಕೋರುವುದು ವಿಶೇಷವಾಗಿತ್ತು.
ಗ್ರಾಮಗಳಲ್ಲಿ ಆಚರಣೆ:
ಚಂದ್ರಗುತ್ತಿ, ಚನ್ನಪಟ್ಟಣ, ಚಿಕ್ಕಮಾಕೊಪ್ಪ, ಅಂಕರವಳ್ಳಿ, ಗ್ರಾಮಗಳಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬ ಆಚರಿಸಿದರು.
ಚಂದ್ರಗುತ್ತಿ, ಚನ್ನಪಟ್ಟಣ, ಚಿಕ್ಕಮಾಕೊಪ್ಪ, ಅಂಕರವಳ್ಳಿ, ಗ್ರಾಮಗಳಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬ ಆಚರಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post