ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಕುಡಿಯುವ ನೀರಿನ ಸಮಸ್ಯೆ ಹಾಗೂ ಬಸ್ತಿಕೊಪ್ಪ ಗ್ರಾಮದಲ್ಲಿ ಗಣಿಗಾರಿಕೆಯಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ಚರ್ಚಿಸಿ ಸೂಕ್ತ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಬಸ್ತಿಕೊಪ್ಪ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು. ಹಾಗೂ ತೀವ್ರವಾದ ಆಕ್ರೋಶವನ್ನು ಸಹ ವ್ಯಕ್ತಪಡಿಸಿದರು.
ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಗ್ರಾಮ ಪಂಚಾಯಿತಿ ಚಂದ್ರಗುತ್ತಿ ವತಿಯಿಂದ ಬುಧವಾರದಂದು ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಬಸ್ತಿಕೊಪ್ಪ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಕುರಿತು ಪ್ರಶ್ನೆ ಎತ್ತಿದರು.
ಗ್ರಾಮದಲ್ಲಿ ಗಣಿಗಾರಿಕೆಗೆ ಯಾವುದೇ ಕಾರಣ ಬೇಕಿಲ್ಲ ಕೂಡಲೇ ನಿಲ್ಲಿಸಬೇಕು. ಶೀಘ್ರ ಪರಿಹಾರಾತ್ಮಕ ನಿರ್ಧಾರ ಬರಬೇಕು ಅಧಿಕಾರಿಗಳು ಗ್ರಾಮದಲ್ಲಿ ಒಂದು ಸಭೆ ಸೇರಿ ಒಮ್ಮತದ ನಿರ್ಧಾರವಾಗಬೇಕು ಎಂದು ಆಗ್ರಹಿಸಿದರು.
Also read: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಹಿನ್ನೆಲೆ ಶಿಕ್ಷಕನ ಬಂಧನ
ಗ್ರಾಮ ಪಂಚಾಯಿತಿಯಿಂದ ನೂತನ ಗಣಿಗಾರಿಕೆಗೆ ಯಾವುದೇ ಪರವಾನಿಗೆ ನೀಡಿರುವುದಿಲ್ಲ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಪರಿಹಾರ ಕಂಡುಕೊಳ್ಳಬೇಕು. ಜನಮಾರಕ ಚಟುವಟಿಕೆಗಳಿಗೆ ಸ್ಥಳೀಯ ಗ್ರಾಮ ಪಂಚಾಯಿತಿಯವರು ಯಾವುದೇ ಕಾರಣಕ್ಕೂ ಸಹಕರಿಸುವಂತಿಲ್ಲ ಎಂದರು.
ಗಣಿಗಾರಿಕೆಯಿಂದ ಪರಿಸರದಲ್ಲಿ ಉಂಟಾಗುತ್ತಿರುವ ಅನಾನುಕೂಲತೆ ಹಾಗೂ ಮಾರಕ ಚಟುವಟಿಕೆಗಳ ಬಗ್ಗೆ, ಪ್ರಾಣಿ, ಪಕ್ಷಿ, ಸಮಸ್ತ ಜೀವಸಂಕುಲದ ಬಗ್ಗೆ ಅರಿವು ಮೂಡಿಸಿ, ಜೀವ ವೈವಿಧ್ಯ ರೂಪುರೇಷೆ ಹಾಗೂ ಪಾಲಿಸಬೇಕಾದ ಕಾನೂನು ನಿಯಮಗಳನ್ನು ಸ್ಥಳೀಯರಿಗೆ ತಾಲೂಕು ಜೀವವೈವಿಧ್ಯ ಸಮಿತಿ ಸದಸ್ಯರಾದ ಶ್ರೀಪಾದ್ ಬಿಚ್ಚುಗತ್ತಿರವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಂ.ಪಂ. ಅಧ್ಯಕ್ಷ ರತ್ನಾಕರ್ ಎಂ.ಪಿ. ಮಾತನಾಡಿದರು.
ಕೃಷಿ ಅಧಿಕಾರಿ ಶಂಕರ್ ಚರಾಟೆ, ಗ್ರಾಂ.ಪಂ. ಉಪಾಧ್ಯಕ್ಷೆ ಲಕ್ಷ್ಮೀ ಚಂದ್ರಪ್ಪ, ಗ್ರಾಂ.ಪಂ ಜೀವವೈವಿಧ್ಯ ಸಮಿತಿಯ ಅಧ್ಯಕ್ಷ ದತ್ತು ಹೆಗಡೆ, ಸದಸ್ಯರಾದ ರೇಣುಕಾ ಪ್ರಸಾದ್, ಲೋಕೇಶ್,ಸಲೀಂ, ತಿರುಪತಿ ಬಾಡದಬೈಲು, ಕೇಶವ್, ಶಿಲ್ಪಾ ಗಿರಿ ಗೌಡರ್, ಸುಧಾ, ಶ್ರೀಮತಿ, ಶಾಖಾಧಿಕಾರಿ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ಗ್ರಾಮಸ್ಥರು ಸೇರಿದಂತೆ ಮತ್ತಿರರಿದ್ದರು.
ವರದಿ: ಮಧುರಾಮ್, ಸೊರಬ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















