Read - 2 minutesಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಧರ್ಮಸ್ಥಳ ಯೋಜನೆಯು ಭತ್ತ ಬೆಳೆಯುವ ರೈತರಿಗೆ ಉಪಯೋಗವಾಗಲೆಂದು ಯಂತ್ರಗಳನ್ನು ಒದಗಿಸುತ್ತಿದೆ ಎಂದು ಧರ್ಮಸ್ಥಳ ಸಂಘದ ತಾಲೂಕು ಯೋಜನಾಧಿಕಾರಿ ಸುಬ್ರಾಯ್ ನಾಯ್ಕ್ ಹೇಳಿದರು,
ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಸೊರಬ ವತಿಯಿಂದ ಚಂದ್ರಗುತ್ತಿ ಸಮೀಪದ ಅಂಕರವಳ್ಳಿ ಗ್ರಾಮದ ಸದಾನಂದಗೌಡರ ಗದ್ದೆಯಲ್ಲಿ ಯಂತ್ರಕೃತ ಭತ್ತ ನಾಟಿ ಪ್ರಾತ್ಯಕ್ಷಿಕ ನಾಟಿ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿ,
ಯಂತ್ರದ ಸದುಪಯೋಗವನ್ನು ಪಡಿಸಿಕೊಂಡು ಟ್ರೈಗಳನ್ನು ಬಳಸಿಕೊಂಡು ಸಸಿ ಮಡಿ ರಚನೆ ಮಾಡಿಕೊಂಡರೆ ಯಂತ್ರದ ಮೂಲಕ ನಾಟಿ ಮಾಡಿಕೊಡಲಾಗುವದು, ಇಲ್ಲಿ ಯಾವುದೇ ಕೂಲಿ ಆಳಿನ ಅವಶ್ಯಕತೆ ಬೇಕಾಗುವದಿಲ್ಲ, ಹಾಗೂ ಯಂತ್ರದ ಮೂಲಕ ನಾಟಿಯಾಗುವಾಗ ಭತ್ತದ ಸಸಿಯ ಬೇರು ಹರಿಯದೆ ನಾಟಿಯಾಗುವದರಿಂದ ಹಿಳ್ಳೆಗಳು ಹೆಚ್ಚು ಬಂದು ಇಳುವರಿಯು ಹೆಚ್ಚಾಗುವುದು, ಒಟ್ಟಿನಲ್ಲಿ ಭತ್ತ ಕೃಷಿಯಲ್ಲಿ ಯಂತ್ರಗಳ ಬಳಕೆ ಮಾಡಿಕೊಳ್ಳುವುದರಿಂದ ಖರ್ಚು ಹಾಗೂ ಸಮಯದ ಉಳಿತಾಯವಾಗುತ್ತದೆ, ತಿಳಿಸಿದರು,
Also read: ನಾಡಹಬ್ಬ ದಸರಾ ಜನರ ಉತ್ಸವವಾಗಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ
ಯೋಜನೆಯಿಂದ ದೊರಕುವ ಯಂತ್ರನಾಟಿಯ ಸೌಲಭ್ಯವನ್ನು ರೈತರು ಬಳಸಿಕೊಳ್ಳಬೇಕು ಎಂದು ರೈತರಿಗೆ ಕರೆಕೊಟ್ಟರು. ಈ ಸಂದರ್ಭದಲ್ಲಿ ಯಂತ್ರನಾಟಿ ಅಳವಡಿಸಿಕೊಂಡಿರುವ ರೈತರಾದ ಸದಾನಂದಗೌಡರು ಮಾತನಾಡಿ ಕಳೆದ ವರ್ಷ ನಾನು ಯಂತ್ರ ನಾಟಿ ಮಾಡಿ ಭತ್ತ ಮತ್ತು ಭತ್ತದ ಹುಲ್ಲು ಎರಡರಲ್ಲೂ ಹೆಚ್ಚಿನ ಇಳುವರಿ ಕಂದುಕೊಂಡಿದ್ದೇನೆ ರೈತರು ನಿರ್ಭಯದಿಂದ ಯಂತ್ರನಾಟಿ ಮಾಡಿಸಬಹುದು ಎಂದರು,
ಕೃಷಿ ಮೇಲ್ವಿಚಾರಕ ಲೋಕೇಶ್ ದೊಡ್ಡಬಾರ್ಕಿ ಸ್ವಾಗತಿಸಿ, ವಂದಿಸಿದರು ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಜಯಶೀಲಗೌಡರು, ಪ್ರಬಂಧಕ ನವಾಜ್, ವಲಯ ಮೇಲ್ವಿಚಾರಕ ಕುಮಾರ, ಚಾಲಕ ಗಣಪತಿ,ಯೋಗೀಶ್ ಸೇರಿದಂತೆ, ಅಂಕರವಳ್ಳಿ ಗ್ರಾಮದ ರೈತರು, ಗ್ರಾಮಸ್ಥರು ಉಪಸ್ಥಿತರಿದ್ದರು.
Discussion about this post