ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ Tamil Nadu elections ಆಡಳಿತಾರೂಢ ಡಿಎಂಕೆ DMK ಭಾರೀ ಹಿನ್ನಡೆ ಅನುಭವಿಸುತ್ತಿರುವ ಬೆನ್ನಲ್ಲೇ ಸನ್ ಟಿವಿ ನೆಟ್ವರ್ಕ್ ಲಿಮಿಟೆಡ್ ಷೇರುಗಳ Sun Network shares ಭಾರೀ ಮಟ್ಟದಲ್ಲಿ ಕುಸಿತ ಕಂಡಿವೆ.
ಚುನಾವಣಾ ಫಲಿತಾಂಶದಲ್ಲಿ ಡಿಎಂಕೆ ಹಿನ್ನಡೆ ಅನುಭವಿಸಲು ಆರಂಭವಾದ ಬೆನ್ನಲ್ಲೇ ಈ ಷೇರುಗಳ ಕುಸಿತವೂ ಸಹ ಆರಂಭವಾಯಿತು.
ಸನ್ ಟಿವಿ ನೆಟ್ವರ್ಕ್ ಲಿಮಿಟೆಡ್ ಷೇರುಗಳು ಬರೊಬ್ಬರಿ ಶೇ. 9.5 ರಷ್ಟು ಭಾರಿ ಕುಸಿತ ಕಂಡಿವೆ. ಮೇ 4, 2026 ರಂದು ವಹಿವಾಟಿನ ಅವಧಿಯಲ್ಲಿ ಷೇರುಗಳ ಬೆಲೆ 547.55 ಕ್ಕೆ ಇಳಿಕೆಯಾಗಿದೆ.
ಹಿಂದಿನ ದಿನದ ಅಂತ್ಯದ ದರ 605.60 ಕ್ಕೆ ಹೋಲಿಸಿದರೆ, ಇಂದು 548.10 ರವರೆಗೆ ಕುಸಿದಿದ್ದು, ಒಂದೇ ದಿನ ಸನ್ ಟಿವಿ ಷೇರುಗಳ ಬೆಲೆ ಬರೊಬ್ಬರಿ 57.5 ರೂ ಕುಸಿದಿದೆ.
ಸನ್ ಟಿವಿಯ ಪ್ರವರ್ತಕರಾದ ಮಾರನ್ ಕುಟುಂಬವು ಡಿಎಂಕೆ ಪಕ್ಷದೊಂದಿಗೆ ನಿಕಟ ಸಂಬಂಧ ಹೊಂದಿರುವುದರಿಂದ, ಚುನಾವಣಾ ಫಲಿತಾಂಶಗಳು ನೇರವಾಗಿ ಸಂಸ್ಥೆಯ ಈ ಷೇರಿನ ಮೇಲೆ ಪರಿಣಾಮ ಬೀರುತ್ತವೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 






















