ಕಲ್ಪ ಮೀಡಿಯಾ ಹೌಸ್ | ಚೆನ್ನೈ |
ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ವಕ್ಫ್ ತಿದ್ದುಪಡಿ ಮಸೂದೆ #Waqf Amendment Bill ನಿನ್ನೆ ತಡರಾತ್ರಿ 2 ಗಂಟೆಗೆ ಲೋಕಸಭೆಯಲ್ಲಿ ಅಂಗೀಕಾರವಾದ ಹಿನ್ನೆಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್, #M K Stalin ಮಸೂದೆ ವಿರುದ್ಧ ನಾವು ಸುಪ್ರೀಂ ಕೋರ್ಟ್’ನಲ್ಲಿ ಮೊಕದ್ದಮೆ ಹೂಡಲಿದ್ದೇವೆ ಎಂದು ತಿಳಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಲೋಕಸಭೆಯಲ್ಲಿ #Parliament ಅಂಗೀಕಾರವಾಗಿರುವ ವಕ್ಫ್ ಮಸೂದೆ ವಿರುದ್ಧ ನಮ್ಮ ಪಕ್ಷ ಸುಪ್ರೀಂ ಕೋರ್ಟ್’ನಲ್ಲಿ ಮೊಕದ್ದಮೆ ಹೂಡಲಿದೆ. ದೇಶದಲ್ಲಿ ಬಹುಸಂಖ್ಯಾತ ಪP್ಷÀಗಳ ವಿರೋಧದ ಹೊರತಾಗಿಯೂ ಕೆಲವು ಮಿತ್ರಪಕ್ಷಗಳ ಆದೇಶದ ಮೇರೆಗೆ ತಿದ್ದುಪಡಿಯನ್ನು ಅಂಗೀಕರಿಸುವುದು ಸಂವಿಧಾನದ ರಚನೆಯ ಮೇಲಿನ ದಾಳಿ ಎಂದು ಹೇಳಿದ್ದಾರೆ.
ಇದು ಧಾರ್ಮಿಕ ಸಾಮರಸ್ಯವನ್ನು ಕದಡುವ ಕೃತ್ಯವಾಗಿದ್ದು, ಇದನ್ನು ಎತ್ತಿ ತೋರಿಸಲು, ನಾವು ಇಂದಿನ ವಿಧಾನಸಭೆ ಕಲಾಪಗಳಲ್ಲಿ ಕಪ್ಪು ಬ್ಯಾಡ್ಜ್ ಧರಿಸಿ ಭಾಗವಹಿಸುತ್ತಿದ್ದೇವೆ ಎಂದು ಸದನ ಸದಸ್ಯರಿಗೆ ತಿಳಿಸಿದರು.
Also read: ರಾಜ್ಯದ ಹಲವಡೆ ಮೋಡ ವಾತಾವರಣ | ಈ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದ ಮಳೆ ಸಾಧ್ಯತೆ
ಈ ವಿವಾದಾತ್ಮಕ ತಿದ್ದುಪಡಿಯ ವಿರುದ್ಧ ಡಿಎಂಕೆ ಪರವಾಗಿ ಸುಪ್ರೀಂ ಕೋರ್ಟ್’ನಲ್ಲಿ #Supreme Court ಪ್ರಕರಣ ದಾಖಲಿಸಲಾಗುವುದು. ವಕ್ಫ್ ಮಂಡಳಿಯ ಸ್ವಾಯತ್ತತೆಯನ್ನು ನಾಶಪಡಿಸುವ ಮತ್ತು ಅಲ್ಪಸಂಖ್ಯಾತ ಮುಸ್ಲಿಂ ಜನಸಂಖ್ಯೆಗೆ ಬೆದರಿಕೆ ಹಾಕುವ ಕೇಂದ್ರ ಸರ್ಕಾರದ ಕಾನೂನಿನ ವಿರುದ್ಧ ತಮಿಳುನಾಡು ಹೋರಾಡಲಿದೆ ಎಂದು ಸ್ಟಾಲಿನ್ ಹೇಳಿದಾಗ ಡಿಎಂಕೆ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.

232 ಸಂಸದರು ವಿರುದ್ಧ ಮತ ಚಲಾಯಿಸಿದರೂ ವಕ್ಫ್ ಕಾಯ್ದೆಯ ತಿದ್ದುಪಡಿಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಈ ಸಂಖ್ಯೆ ಹೆಚ್ಚಾಗಬಹುದು. ಕೇವಲ 288 ಸದಸ್ಯರು ಮಾತ್ರ ಅದರ ಪರವಾಗಿ ಮತ ಚಲಾಯಿಸಿದ್ದಾರೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post