ಮೈಸೂರು: ಈ ಹಿಂದೆಯೂ ಹಲವು ಬಾರಿ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಈಗ ವಿದ್ಯುನ್ಮಾನ ಮಾಧ್ಯಮಗಳ ನಿಗ್ರಹಕ್ಕೆ ಹೊಸ ಕಾನೂನನ್ನು ಪರಿಚಯಿಸಲು ಯೋಚಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಅವರು, ಎಲೆಕ್ಟ್ರಾನಿಕ್ ಮಾಧ್ಯಮವು ಯಾವುದೋ ನಿರ್ದಿಷ್ಟ ಉದ್ದೇಶ ಮತ್ತು ಆಶಯದ ಪ್ರಕಾರ ಕಾರ್ಯನಿರ್ವಹಿಸುತ್ತಿದೆ. ಅದರಿಂದ ಕೆಲವೊಂದು ತಪ್ಪುಗಳು ಸಂಭವಿಸುತ್ತಿದೆ. ಹೀಗಾಗಿ ಅವನ್ನು ನಿಗ್ರಹಿಸಲು ಹೊಸ ಕಾನೂನನ್ನು ಪರಿಚಯಿಸಲು ಯೋಜಿಸಿದ್ದೇನೆ ಎಂದಿದ್ದಾರೆ.
ನಾವೇನು ಇಲ್ಲಿ ಬಿಟ್ಟಿ ಬಿದ್ದಿದ್ದೇವಾ? ರಾಜಕೀಯದ ಬಗ್ಗೆ ನಿಮಗೆ ಏನು ಗೊತ್ತು? ಟಿಆರ್’ಪಿಗಾಗಿ ನೀವು ಏಕೆ ಮೂಲಭೂತವಾದಿಗಳಾಗುತ್ತಿದ್ದೀರಿ? ನೀವೇಕೆ ನಮ್ಮ ಮೇಲೆ ವ್ಯಥಾ ಆರೋಪಿಸಿದ್ದೀರಿ? ಮಾಧ್ಯಮವು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ ಕಾರಣ ಕೃಷಿಕರ, ರೈತರ ಬಗೆಗೆ ಹೆಚ್ಚು ಕಾಳಜಿಯುತ ಕಾರ್ಯಕ್ರಮ ನೀಡಿ ಎಂದಿದ್ದಾರೆ.
Discussion about this post