ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ 10 ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿ, ಹಲವು ಅಪರಾಧ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶ್ವಾನಕ್ಕೆ ಇಲಾಖೆ ಆತ್ಮೀಯವಾಗಿ ಬೀಳ್ಕೊಟ್ಟಿದೆ.
ಡಿಎಆರ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಶ್ವಾನಕ್ಕೆ ಆತ್ಮೀಯವಾಗಿ ಬೀಳ್ಕೊಡಲಾಯಿತು.
ಜಿಲ್ಲಾ ಪೊಲೀಸ್ ಶ್ವಾನದಳದಲ್ಲಿ ಸುದೀರ್ಘ 10 ವರ್ಷಗಳಿಗೂ ಹೆಚ್ಚು ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಹಲವಾರು ಅಪರಾಧ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸುವಲ್ಲಿ ಶ್ರಮಿಸಿದ್ದು ಹಿರಿಯ ಅಧಿಕಾರಿಗಳಿಂದ ಪದಕ, ಪ್ರಶಂಸೆ ಹಾಗೂ ಎಲ್ಲರ ಗೌರವಕ್ಕೆ ಈ ಶ್ವಾನ ಪಾತ್ರರಾಗಿದೆ.
Also read: ದೋಷಯುಕ್ತ ಎಲೆಕ್ಟ್ರಿಕ್ ವಾಹನ ಕೊಟ್ಟ ಕಂಪೆನಿಗೆ ಬಿತ್ತು ಭರ್ಜರಿ ದಂಡ
ಈ ಶ್ವಾನದ ಹ್ಯಾಂಡ್ಲರ್’ಗಳಾಗಿ ಎಎಚ್’ಸಿಗಳಾದ ಮಂಜುನಾಥ ಹಾಗೂ ಸಹಾಯಕ ನಿರ್ವಾಹಕರಾದ ಸಿ. ಕುಮಾರ್ ಅವರುಗಳು ಕರ್ತವ್ಯ ನಿರ್ವಹಿಸಿದ್ದಾರೆ.
ಈ ಶ್ವಾನವು ತನ್ನ ಸೇವಾ ಅವಧಿಯಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜರುಗಿದ ಕಳ್ಳತನ, ದರೋಡೆ ಹಾಗೂ ಕೊಲೆ ಇತ್ಯಾದಿ ಒಟ್ಟು 204 ಪ್ರಕರಣಗಳಲ್ಲಿ 35 ರಲ್ಲಿ ಅಪರಾಧ ಪ್ರಕರಣಗಳ ಕುರಿತಾದ ಸುಳಿವು ಹಾಗೂ 9 ಜನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪೊಲೀಸ್ ಇಲಾಖೆಗೆ ಸಹಕರಿಸಿದೆ.
ಸದರಿ ಶ್ವಾನವು ವಾರ್ಷಿಕವಾಗಿ ನಡೆಸಲಾಗುವ ಪೊಲೀಸ್ ಡ್ಯೂಟಿ ಮೀಟ್’ನಲ್ಲಿ ಹಲವಾರು ಪದಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿಯನ್ನು ತಂದು ಕೊಟ್ಟಿರುತ್ತದೆ. ಶ್ವಾನದ ಹ್ಯಾಂಡ್ಲರ್’ಗಳಿಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಸಂಶನ ಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಜಿಲ್ಲೆಯಲ್ಲಿನ ಪೊಲೀಸ್ ಅಧಿಕಾರಿ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post