ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ತುರ್ತು ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿರಿಸುವ ಸಲುವಾಗಿ ಜಿಲ್ಲಾ ಡಿಎಆರ್ ಮೈದಾನದಲ್ಲಿ ವಿವಿಧ ಕಾರ್ಯವಿಧಾನದ ಬಗ್ಗೆ ತರಬೇತಿ ನೀಡಲಾಯಿತು.
ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಅವರ ನೇತೃತ್ವದಲ್ಲಿ ಡಿಎಆರ್ ಮೈದಾನದಲ್ಲಿ Anti Riot Drill ತರಬೇತಿಯನ್ನು ಆಯೋಜಿಸಲಾಗಿತ್ತು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆ, ಗಲಭೆ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಣ, ಅಕ್ರಮ ಕೂಟಗಳ ನಿಯಂತ್ರಣ, ಸಾರ್ವಜನಿಕ ಆಸ್ತಿಪಾಸ್ತಿ ಕಾಪಾಡಲು ಪೊಲೀಸ್ ಪಡೆ ಅನುಸರಿಸಬೇಕಾದ ನಿರ್ಧಿಷ್ಟ ಕಾರ್ಯವಿಧಾನದ ಕುರಿತಾಗಿ ತರಬೇತಿ ನೀಡಲಾಯಿತು.
Also read: ರಾಜ್ಯದಲ್ಲಿ ಮುಂದುವರೆದ ಶ್ವಾನ ಹಾವಳಿ: ಬಳ್ಳಾರಿಯಲ್ಲಿ ನಾಯಿ ಕಡಿತಕ್ಕೆ ಇಬ್ಬರು ಮಕ್ಕಳು ಬಲಿ
ಪ್ರಮುಖವಾಗಿ ಗಲಭೆ ಸಂದರ್ಭದಲ್ಲಿ ದುಷ್ಕರ್ಮಿಗಳು ನಡೆದುಕೊಳ್ಳುವ ರೀತಿಯ ಹಾಗೂ ಅಂತಹ ಸಂದರ್ಭದಲ್ಲಿ ಪೊಲೀಸ್ ಪಡೆ ಕೈಗೊಳ್ಳಬೇಕಾದ ನಿಯಂತ್ರಣಾ ಕ್ರಮಗಳು, ಗಲಭೆಕೋರರನ್ನು ಹತ್ತಿಕ್ಕುವ ಕ್ರಮಗಳು, ಪರಿಸ್ಥಿತಿಗೆ ಅನುಗುಣವಾಗಿ ಆಯುಧಗಳ ಬಳಕೆ, ಗಲಭೆಯಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸುವ ಕ್ರಮ ಸೇರಿದಂತೆ ವಿವಿಧ ಕಾರ್ಯವಿಧಾನಗಳ ಅಣುಕು ಪ್ರದರ್ಶನ ಹಾಗೂ ತರಬೇತಿ ನಡೆಯಿತು.ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post