ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಹಾಸನಾಂಬೆ #Hasanambe ದರ್ಶನಕ್ಕೆ ಹೊರಟಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದು, ಮಹಿಳೆ ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ಅ.30ರ ಬುಧವಾರ ನಡೆದಿದೆ.
ಮೃತಪಟ್ಟ ಮಹಿಳೆ ಗವನಹಳ್ಳಿ ಗ್ರಾಮದ ಮಂಜು ಅವರ ಪತ್ನಿ ವನಿತಾ (38) ಎಂದು ಗುರುತಿಸಲಾಗಿದೆ.
Also read: 900 ದಿನಗಳದರೂ ಕರುಣೆ ತೋರಿಸದ ಕೇಂದ್ರ ಸರಕಾರ | ಏನಿದು ವಿಚಾರ? ಯಾವ ಜಿಲ್ಲೆಗೆ ಸಂಬಂಧಿಸಿದ್ದು?
ಹಾಸನಾಂಬೆ ದರ್ಶನಕ್ಕೆ ಹೊರಟಿದ್ದ ಮಂಜು-ವನಿತಾ ದಂಪತಿ ಪ್ರಯಾಣಿಸುತ್ತಿದ್ದ ಕಾರು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಬೇಲೂರು ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದಿದ್ದು ತಕ್ಷಣ ಕಲ್ಕೆರೆ ಗ್ರಾಮಸ್ಥರು ಕಾರಿಗೆ ಹಗ್ಗ ಕಟ್ಟಿ ಎಳೆದು ರಕ್ಷಣಾ ಕಾರ್ಯಚರಣೆ ಮಾಡಿದ್ದರು. ಕಾರು ಕೆರೆಗೆ ಬಿದ್ದು ನೀರಲ್ಲಿ ಮುಳುಗಿದ್ದರಿಂದ ವನಿತಾ ನೀರು ಕುಡಿದಿದ್ದರು. ಆಕೆಯನ್ನು ಬದುಕಿಸುವ ಗ್ರಾಮಸ್ಥರ ಪ್ರಯತ್ನ ವಿಫಲವಾಗಿದೆ.
ಚಿಕ್ಕಮಗಳೂರು ತಾಲೂಕಿನ ಗವನಹಳ್ಳಿ ಗ್ರಾಮದ ಬೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post