ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಕೇರಳದ ವಯನಾಡ್, ಉತ್ತರ ಕನ್ನಡದ ಶಿರೂರುಗಳಲ್ಲಿ ಭಾರೀ ಗುಡ್ಡ ಕುಸಿತ #Wayanad-Shirur hill collapse ಉಂಟಾದ ಬೆನ್ನಲ್ಲೇ ಮುಂಜಾಗ್ರತೆ ವಹಿಸಿರುವ ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಕೊಟ್ಟಿಗೆಹಾರ ಚೆಕ್ ಪೋಸ್ಟ್ ಬಳಿಯಲ್ಲಿ ಡಿಎಆರ್ ತುಕಡಿಯನ್ನು ನಿಯೋಸಿದ್ದಾರೆ.
ಚಾರ್ಮಾಡಿ ಘಾಟ್ #Charmadighat ಆರಂಭದ ಸ್ಥಳವಾದ ಮೂಡಿಗೆರೆ ತಾಲೂಕಿನ ಕೊಟ್ಟಿಗೆ ಹಾರ ಚೆಕ್ ಪೋಸ್ಟ್ ಬಳಿಯಲ್ಲಿ ತುಕಡಿ ನಿಯೋಜಿಸಲಾಗಿದ್ದು, ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಲಾಗಿದೆ.
Also read: ಶಿರಾಡ್ ಗುಡ್ಡ ಕುಸಿತದ ಭೀಕರತೆಗೆ ಶಾಕ್ | ಸಿಎಂ ಸಿದ್ದರಾಮಯ್ಯ ಪ್ರಶ್ನೆಗಳಿಗೆ ಅಧಿಕಾರಿಗಳು ಸುಸ್ತು
ನಿರಂತರ ಕುಂಭದ್ರೋಣ ಮಳೆಯಿಂದ ಚಿಕ್ಕಮಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಬೆಟ್ಟಗುಡ್ಡಗಳ ಮಾರ್ಗ ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಯಾವುದೇ ರೀತಿಯ ಅನಾಹುತ ಸಂಭವಿಸುವ ಸಾಧ್ಯತೆ ಇರುವುರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.
ಚಿಕ್ಕಮಗಳೂರು-ಮಂಗಳೂರು ನಡುವಿನ ಮಾರ್ಗದಲ್ಲಿ ಬೆಟ್ಟ-ಗುಡ್ಡಗಳ ನಡುವೆ 22 ಕಿಮೀ ಸಾಗಬೇಕಾಗಿದ್ದು, ಅತ್ಯಂತ ಅಪಾಯಕಾರಿಯಾಗಿದೆ. 2019 ರಿಂದಲೂ ಪ್ರತಿ ವರ್ಷ ಚಾರ್ಮಾಡಿ ಘಾಟಿ ಕುಸಿತಕ್ಕೊಳಗಾಗುತ್ತಲೇ ಇದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post