ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಮಲೆನಾಡಿನಲ್ಲಿ ನಿರಂತರವಾಗಿ ಅಬ್ಬರಿಸುತ್ತಿರುವ ಮಳೆಯ ಪರಿಣಾಮ ಭದ್ರಾ ನದಿ #Bhadra river ಉಕ್ಕಿ ಹರಿಯುತ್ತಿದ್ದು, ಪರಿಣಾಮವಾಗಿ ಬಾಳೆಹೊನ್ನೂರು ಪಟ್ಟಣ ಜಲಾವೃತವಾಗಿದೆ.
ಭದ್ರಾ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿ ಉಕ್ಕಿ ಹರಿಯುತ್ತಿದೆ. ಭಾಗಶಃ ಹಸಿರು, ಮಣ್ಣು ಮಿಶ್ರಿತದ ಮಳೆ ನೀರಿನಲ್ಲಿ ಬಾಳೆಹೊನ್ನೂರು ಮುಳುಗಿದೆ.
Also read: ವಯನಾಡ್ ಭೂಕುಸಿತ | ಸಾವಿನ ಸಂಖ್ಯೆ 158ಕ್ಕೆ ಏರಿಕೆ | 211 ಮಂದಿ ನಾಪತ್ತೆ | ಮತ್ತೆ ರೆಡ್ ಅಲರ್ಟ್
ಎರಡು ದಿನಗಳಿಂದ ಸುರಿದ ಭಾರೀ ಮಳೆಗೆ ಭದ್ರಾ ನದಿ ಉಕ್ಕಿ ಹರಿದಿದ್ದು ಪಟ್ಟಣದ ತಗ್ಗು ಪ್ರದೇಶಗಳು ಭದ್ರಾ ನದಿ ದಂಡೆಯಲ್ಲಿರುವ ತೋಟಗಳು ಸಂಪೂರ್ಣ ಮುಳುಗಿದೆ.
ಚಿಕ್ಕಮಗಳೂರು ಜಿಲ್ಲೆಗೆ ಇಂದು ಸಹ ರೆಡ್ ಅಲರ್ಟ್ ಜಾರಿಯಾಗಿದೆ. ರಾಜ್ಯದ ನಾಲ್ಕು ಜಿ¯್ಲÉಗೆ ರೆಡ್ ಅಲರ್ಟ್ ಜಾರಿಯಾಗಿದ್ದರೆ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post