ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶೃಂಗೇರಿ: ಸಮೀಪದ 10ನೆಯ ತರಗತಿಯ ವಿದ್ಯಾರ್ಥಿನಿಯೋರ್ವಳ ಮೇಲೆ 30ಕ್ಕೂ ಹೆಚ್ಚಿನ ಜನ ತಿಂಗಳುಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಿರುವ ಘೋರ ಘಟನೆ ವರದಿಯಾಗಿದೆ.
ಈ ಕುರಿತಂತೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಾಲಕಿ ನೀಡಿರುವ ದೂರಿನ ಆಧಾರದಲ್ಲಿ 17 ಜನರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ತನ್ನ ತಾಯಿಯನ್ನು ಕಳೆದುಕೊಂಡು ದುಃಖದಲ್ಲಿದ್ದ 15 ವರ್ಷದ ಬಾಲಕಿಯ ಮೇಲೆ ಈ ಭಾಗದ ಸುಮಾರು 30ಕ್ಕೂ ಅಧಿಕ ಪುರುಷರು ತಿಂಗಳುಗಳ ಕಾಲ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಅತ್ಯಾಚಾರದ ವೀಡಿಯೋ ಚಿತ್ರೀಕರಣ ಮಾಡಿ, ಸಹಕಾರ ನೀಡದೇ ಇದ್ದರೆ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಸಿ, ನಿರಂತರವಾಗಿ ಅತ್ಯಾಚಾರ ನಡೆಸಲಾಗಿದೆ ಎಂದು ದೂರಲಾಗಿದೆ.
ಇಂತಹ ನೀಚ ಕೃತ್ಯಕ್ಕೆ ಬಾಲಕಿಯ ಹತ್ತಿರದ ಸಂಬಂಧಿಗಳೇ ಸಹಕಾರವಿತ್ತು ಎಂದು ಆರೋಪಿಸಲಾಗಿದ್ದು, ದುರಂತವೆಂದರೆ ಅತ್ಯಾಚಾರ ಎಸಗಿದ ಹಲವು ಯುವಕರ ಪರಿಚಯವೇ ಈ ಬಾಲಿಕಿಗೆ ಇಲ್ಲ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















