ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಇಂದು ಪ್ರಕಟಗೊಂಡ ಎಸ್’ಎಸ್’ಎಲ್’ಸಿ ಫಲಿತಾಂಶದಲ್ಲಿ ನಗರದ ಸೈಂಟ್ ಮೇರಿಸ್ ಶಾಲೆಯ ವಿದ್ಯಾರ್ಥಿಗಳು ರಾಜ್ಯಕ್ಕೆ ಮೊದಲ ರ‍್ಯಾಂಕ್, ಎರಡನೆಯ ರ‍್ಯಾಂಕ್, ಮೂರನೇ ರ‍್ಯಾಂಕ್ ಹಾಗೂ ನಾಲ್ಕನೆಯ ರ‍್ಯಾಂಕ್ ಪಡೆಯುವುದರೊಂದಿಗೆ ಜಿಲ್ಲೆಗೆ ಕೀರ್ತಿ ತಂದಿದ್ದು, ಈ ಶಾಲೆಯು ಶೇ 100 ಫಲಿತಾಂಶ ಪಡೆದಿದೆ.
Also Read: ಮಳೆ ಅವಾಂತರ: ಶಿವಮೊಗ್ಗದ ಗಾಂಧಿ ನಗರದಲ್ಲಿ ಮೊಣಕಾಲುದ್ದ ನೀರು, ಸ್ಥಳೀಯರು ಹಿಡಿ ಶಾಪ
ಈ ಶಾಲೆ ಸುಚರಿತ ಆರ್. ಎಂಬ ವಿದ್ಯಾರ್ಥಿನಿಯು 625 ಅಂಕಗಳಿಗೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಇವರ ತಂದೆ ರಂಗಣ್ಣ ಅವರು ಶಿಕ್ಷಕರಾಗಿ ಕಾರ್ಯ ನಿರ್ವಹಿಸುತಿದ್ದು ತಾಯಿ ಶ್ಯಾಮಲ ಅವರು ಸಹ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಈ ಶಾಲೆ ನೇಹ ಬಿ.ವೈ. ಎಂಬ ವಿದ್ಯಾರ್ಥಿನಿಯು 625 ಅಂಕಗಳಿಗೆ 624 ಅಂಕಗಳನ್ನು ಗಳಿಸುವುದರೊಂದಿಗೆ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ. ಇವರ ತಂದೆ ಬಿ.ಎಸ್. ಯೋಗೇಂದ್ರ ಅವರು ವ್ಯಾಪಾರಸ್ಥರಾಗಿ ಕಾರ್ಯ ನಿರ್ವಹಿಸುತಿದ್ದು ತಾಯಿ ಕೆ.ಸಿ. ಪ್ರೇಮಕುಮಾರಿ ಅವರು ಗೃಹಿಣಿಯಾಗಿದ್ದಾರೆ.
Also Read: ಎಸ್’ಎಸ್’ಎಲ್’ಸಿ ಫಲಿತಾಂಶ: ಶಿವಮೊಗ್ಗ ಜಿಲ್ಲೆಯ ಎಷ್ಟು ವಿದ್ಯಾರ್ಥಿಗಳು 625 ಅಂಕ ಗಳಿಸಿದ್ದಾರೆ? ಇಲ್ಲಿದೆ ಮಾಹಿತಿ
ಈ ಶಾಲೆ ಚಿನ್ಮಯಿ ವಿ. ಎಂಬ ವಿದ್ಯಾರ್ಥಿನಿಯು 625 ಅಂಕಗಳಿಗೆ 623 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ತೃತೀಯ ರ‍್ಯಾಂಕ್ ಪಡೆದಿದ್ದಾರೆ. ಇವರ ತಂದೆ ವಸಂತ್ ಕುಮಾರ್ ಅವರು ಪೋಲಿಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತಿದ್ದು ತಾಯಿ ಸವಿತಾ ಅವರು ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇನ್ನು ಈ ಶಾಲೆಯ ಪಲ್ಲವಿ ಎ. ಎಂಬ ವಿದ್ಯಾರ್ಥಿನಿಯು 625 ಅಂಕಗಳಿಗೆ 622 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ನಾಲ್ಕನೆಯ ರ‍್ಯಾಂಕ್ ಪಡೆದಿದ್ದಾರೆ. ಇವರ ತಂದೆ ಅಶೋಕ್‌ಕುಮಾರ್ ಎಚ್. ಅವರು ವ್ಯವಹಾರಸ್ಥರಾಗಿದ್ದು ತಾಯಿ ವೀಣಾ ಎಚ್.ವಿ. ಅವರು ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಾಲೆಯಲ್ಲಿ ಪ್ರಥಮ ಭಾಷೆ ಕನ್ನಡದಲ್ಲಿ 14 ವಿದ್ಯಾರ್ಥಿಗಳು 125 ಕ್ಕೆ 125 ಅಂಕಗಳನ್ನು ಗಳಿಸಿದ್ದಾರೆ. ಇಂಗ್ಲಿಷ್-12, ಹಿಂದಿ-11, ಗಣಿತ-23, ವಿಜ್ಞಾನ-11 ಹಾಗೂ ಸಮಾಜ ವಿಜ್ಞಾನದಲ್ಲಿ-20 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.
ಒಟ್ಟು 137 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ 86 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನು ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆ ಕೀರ್ತಿ ತಂದಿದ್ದಾರೆ.
Also Read: ಚತುಷ್ಪಥ ರಸ್ತೆ ಅಗಲೀಕರಣ: 875 ಮರಗಳ ಕಟಾವಿಗೆ ಪರಿಸರ ಪ್ರೇಮಿಗಳ ಆಕ್ಷೇಪ
ಈ ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ, ಜಿಲ್ಲೆಗೆ ಹಾಗೂ ಶಾಲೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಸಂಸ್ಥಾಪಕರಾದ ಜೆರಾಲ್ಡ್ ಲೋಬೋ ಅವರು ಮತ್ತು ಪ್ರಿಯಾ ಲೋಬೋ ಅವರು ಶುಭ ಹಾರೈಸಿದ್ದಾರೆ. ಆಡಳಿತಗಾರರಾದ ವಿಕ್ಟರ್ ಫೆಲಿಕ್ಸ್ ಲೋಬೋ, ಮುಖ್ಯ ಶಿಕ್ಷಕರಾದ ಉತ್ತಮ್ ಟಿ.ಎಲ್. ಅವರು ಹಾಗೂ ಶಾಲೆಯ ಶಿಕ್ಷಕ ವೃಂದದವರು ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post