ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಚಾಲಕನ ನಿರ್ಲಕ್ಷದಿಂದ ರಸ್ತೆ ವಿಭಜಕಕ್ಕೆ ಆಟೋ ಡಿಕ್ಕಿಯಾಗಿ ಎರಡು ವರ್ಷದ ಮಗು ಸೇರಿ 13 ಜನರಿಗೆ ಗಾಯವಾಗಿರುವ ಘಟನೆ ನಡೆದಿದೆ.
ನಗರದ ಬಳ್ಳಾರಿ ಮುಖ್ಯ ರಸ್ತೆಯ ಚಳ್ಳಕೆರೆಮ್ಮ ದೇವಸ್ಥಾನದ ಸಮೀಪ ಈ ಅಪಘಾತ ಸಂಭವಿಸಿದ್ದು, ಚಾಲಕ ನಿರ್ಲಕ್ಷತನದಿಂದ ಆಟೋ ಚಾಲನೆ ಮಾಡಿರುವುದೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.
ಚಿಕ್ಕಮ್ಮನಹಳ್ಳಿ ಕಡೆಯಿಂದ ಚಳ್ಳಕೆರೆಗೆ ಆಟೋ ಬರುತ್ತಿದ್ದು ನಗರದ ದೇವಸ್ಥಾನದ ಸಮೀಪ ಅತಿವೇಗದ ಚಾಲನೆಯಿಂದ ಆಟೋ ಒಡಿಸಿಕೊಂಡು ಬರುತ್ತಿದ್ದಾಗ ರೋಡ್ ಹಂಸ್ ನಿಂದ ಆಟೋ ಚಾಲಕ ನಿಯಂತ್ರಣ ತಪ್ಪಿ ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎರಡು ವರ್ಷದ ಮಗು ಸೇರಿದಂತೆ ಚಾಲಕ ರಮೇಶ, ಬೋರಯ್ಯ, ಶಾಂತಮ್ಮ, ಗಿಡ್ಡ ರೆಡ್ಡಿ, ಶಿವಣ್ಣ, ಕಾಸಿಂ, ಶಿವರಾಂ, ನಜೀರ್, ಶಫಿ ಪಾತಿಮ್ ಇತರರಿಗೆ ತಲೆ, ಕಾಲು ಕೈಯಿಗಳಿಗೆ ಗಾಯಗಳಾಗಿದ್ದು ಚಿತ್ರದುರ್ಗ ಹಾಗೂ ಚಳ್ಳಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಚಳ್ಳಕೆರೆ ಪೋಲೀಸರು ಭೇಟಿ ನೀಡಿದ್ದು, ನಗರ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post